Sunday, 29th December 2024

Sukhbir Singh Badal: ಹತ್ಯೆ ಪ್ರಯತ್ನದ ಮರುದಿನವೇ ಗೋಲ್ಡನ್ ಟೆಂಪಲ್‌ನಲ್ಲಿ ‘ಪ್ರಾಯಶ್ಚಿತ’ ಮುಂದುವರಿಸಿದ ಸುಖಬೀರ್

Sukhbir Singh Badal

ಚಂಡೀಗಢ: ಬುಧವಾರ ಅಮೃತಸರದ ಗೋಲ್ಡನ್ ಟೆಂಪಲ್ (Golden Temple) ಪ್ರವೇಶದ್ವಾರದಲ್ಲಿ ಶೂ ಪಾಲಿಷ್‌ ಮಾಡುತ್ತಿದ್ದ ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ (Sukhbir Singh Badal) ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ  ನಡೆಸಲು ಪ್ರಯತ್ನ ಪಟ್ಟಿದ್ದು, ಘಟನೆ ನಡೆದ ಮರುದಿನವೇ ಬಾದಲ್ ಮತ್ತೆ ತಮಗೆ ನೀಡಿದ್ದ ಶಿಕ್ಷೆಯನ್ನು ಪೂರ್ಣಗೊಳಿಸಲು ಸೇವಾ ಕಾರ್ಯಕ್ಕೆ ಮರಳಿದ್ದಾರೆ.

ಇತ್ತೀಚೆಗೆ ಸಿಖ್‌ರ ಸರ್ವೋಚ್ಛ ಸರ್ವೋಚ್ಚ ಧಾರ್ಮಿಕ ಸಂಸ್ಥೆಯಾದ ಅಕಾಲ್ ತಖ್ತ್ ಬಾದಲ್‌ ಅವರಿಗೆ ಸೇವಕರ ಉಡುಪು ಧರಿಸಿ ಅಮೃತಸರದ ಸ್ವರ್ಣಮಂದಿರದ ಶೌಚಾಲಯ ಶುಚಿಗೊಳಿಬೇಕು. ಮಂದಿರಕ್ಕೆ ಆಗಮಿಸುವ ಭಕ್ತರ ಚಪ್ಪಲಿ ಪಾಲಿಶ್ ಮಾಡಬೇಕು. ಲಂಗರ್ (ಭೋಜನ ಶಾಲೆ)ಯಲ್ಲಿ ಊಟ ಬಡಿಸಿ ಪಾತ್ರೆ ತೊಳೆಯಬೇಕು ಮತ್ತು ಇನ್ನೂ 3 ಗುರುದ್ವಾರಗಳಲ್ಲಿ ಸೇವೆ ಮಾಡಬೇಕು ಎಂದು ಆದೇಶ ಹೊರಡಿಸಿತ್ತು. 2015ರಲ್ಲಿ ಬಾದಲ್‌ ಡಿಸಿಎಂ ಆಗಿದ್ದಾಗ ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್‌’ಗೆ ಅಗೌರವ ತೋರಿಸಿದ್ದ ಗುರ್‌ಮೀತ್‌ ರಾಮ ರಹೀಂ ಎನ್ನುವವರಿಗೆ ಕ್ಷಮಾದಾನ ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದ್ದ ಅಕಾಲ್ ತಖ್ತ್, ಬಾದಲ್‌ ಹಾಗೂ ಅವರ ಆಡಳಿತಾವಧಿಯಲ್ಲಿ ಸಚಿವರಾಗಿದ್ದವರಿಗೆ ಶಿಕ್ಷೆಯನ್ನು ಪ್ರಕಟಿಸಿತ್ತು.

ಡಿ. 3ರಂದು ಸೇವೆಯಲ್ಲಿ ನಿರತರಾಗಿದ್ದ ಬಾದಲ್‌ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಘಟನೆ ನಡೆದ ಮರುದಿನವೇ ಬಾದಲ್‌ ಮತ್ತೆ ಸೇವೆಗೆ ಮರಳಿದ್ದು, ಸೇವಾಕಾರ್ಯದಲ್ಲಿ ತೊಡಗಿದ್ದಾರೆ. ಝಡ್‌ ಪ್ಲಸ್‌ ಸೆಕ್ಯುರಿಟಿಯೊಂದಿಗೆ ರೂಪನಗರದಲ್ಲಿರುವ ತಖ್ತ್ ಕೇಸ್‌ಗಢ್ ಸಾಹಿಬ್‌ನಲ್ಲಿ ಮಾಜಿ ಉಪಮುಖ್ಯಮಂತ್ರಿ ಊಟದ ತಟ್ಟೆಗಳನ್ನು ತೊಳೆಯುತ್ತಿದ್ದಾರೆ.

ದರ್ಬಾರ್ ಸಾಹಿಬ್ ಮತ್ತು ಫತೇಘರ್ ಸಾಹಿಬ್‌ನಲ್ಲಿ ತಲಾ ಎರಡು ದಿನಗಳ ಕಾಲ ಸೇವಾ ಕಾರ್ಯವನ್ನು ಮಾಡುವಂತೆ ಅಕಾಲ್ ತಖ್ತ್ ಆದೇಶ ನೀಡಿದೆ.

ಘಟನೆಯ ನಂತರ ದರ್ಬಾರ್ ಸಾಹಿಬ್ ಸುತ್ತಮುತ್ತಲಿನ ಪ್ರದೇಶಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ದರ್ಬಾರ್ ಸಾಹಿಬ್ ಒಳಗೆ ಬರುವ ಭಕ್ತರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ : Sukhbir Singh Badal: ಸುಖಬೀರ್‌ ಬಾದಲ್‌ ಹತ್ಯೆ ಯತ್ನದ ಹಿಂದೆ ಖಲಿಸ್ತಾನಿಗಳ ಕೈವಾಡ! ಬಂಧಿತ ನರೇನ್‌ ಸಿಂಗ್‌ ಚೌರ ಯಾರು?