Friday, 22nd November 2024

೧೯ ವಿಪಕ್ಷ ಸಂಸತ್ ಸದಸ್ಯರ ಅಮಾನತು

ನವದೆಹಲಿ : ಕಲಾಪ ಅಡ್ಡಿಪಡಿಸಿದ್ದಕ್ಕಾಗಿ ರಾಜ್ಯಸಭೆಯ ಹತ್ತೊಂಬತ್ತು ವಿರೋಧ ಪಕ್ಷದ ಸಂಸತ್ ಸದಸ್ಯರನ್ನ ಮಂಗಳವಾರ ವಾರದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ.‌

ಹಣದುಬ್ಬರದ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ 20ಕ್ಕೂ ಹೆಚ್ಚು ಸಂಸದರನ್ನ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಭಾಗವಹಿಸಲು ಈಗ ನಿರ್ಬಂಧಿಸಲಾಗಿದೆ.

ತೃಣಮೂಲ ಕಾಂಗ್ರೆಸ್‌ನ ಏಳು ಸಂಸದರು ಮಂಗಳವಾರ ಅವರ ವಿರುದ್ಧ ಕ್ರಮ ಕೈಗೊಂಡ ವರಲ್ಲಿ ಸೇರಿದ್ದಾರೆ. ಅಮಾನತುಗೊಂಡ ಸಂಸದರು ಅಶಿಸ್ತಿನ ವರ್ತನೆಯ ಆರೋಪ ಎದುರಿಸುತ್ತಿದ್ದಾರೆ.

ಸುಶ್ಮಿತಾ ದೇವ್, ಮೌಸಮ್ ನೂರ್, ಡಾ.ಶಂತನು ಸೇನ್, ಡೋಲಾ ಸೇನ್, ಶಂತನು ಸೇನ್, ನಾಡಿಮಲ್ ಹಕ್, ಅಭಿ ರಂಜನ್ ಬಿಸ್ವಾಸ್ ಮತ್ತು ಶಾಂತಾ ಛೆಟ್ರಿ ಅವರನ್ನು ಅಮಾನತು ಗೊಳಿಸಲಾಗಿದೆ. ಸಿಪಿಐ(ಎಂ)ನ ಎ.ಎ.ರಹೀಂ, ಎಡಪಂಥದ ಮೊಹಮ್ಮದ್ ಅಬ್ದುಲ್ಲಾ ಮತ್ತು ಡಿಎಂಕೆಯ ಕನಿಮೋಳಿ ಕೂಡ ನಿಷೇಧಕ್ಕೊಳಗಾದವರಲ್ಲಿ ಸೇರಿದ್ದಾರೆ