Friday, 22nd November 2024

ಕರೋನಾ ವಿರುದ್ದ ಹೋರಾಡಲು ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸಿ: ಮೋದಿಗೆ ಮಾಜಿ ಪಿಎಂ ಪತ್ರ

ನವದೆಹಲಿ: ಸಾಂಕ್ರಾಮಿಕ ವಿರುದ್ಧ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿರುವ ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್ ಪತ್ರ ಬರೆದಿದ್ದಾರೆ.

ಲಸಿಕೆ ಪಡೆದುಕೊಂಡ ಶೇಕಡಾವಾರು ಜನಸಂಖ್ಯೆ ಕಡೆಗೆ ಗಮನ ಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಸಲಹೆ ನೀಡಿದ್ದಾರೆ.

ಕೋವಿಡ್-19 ವಿರುದ್ದದ ಹೋರಾಟದಲ್ಲಿ ವ್ಯಾಕ್ಸಿನೇಷನ್ ಹೆಚ್ಚಳಕ್ಕೆ ಪ್ರಯತ್ನಿಸಬೇಕು, ಎಷ್ಟು ಸಂಖ್ಯೆಯ ಲಸಿಕೆ ಹಾಕಲಾಗಿದೆ ಎಂಬುದನ್ನು ನೋಡಬಾರದು. ಲಸಿಕೆ ಪಡೆದ ಶೇಕಡಾವಾರು ಜನಸಂಖ್ಯೆ ಮೇಲೆ ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದ್ದಾರೆ.

ಸರಿಯಾದ ನೀತಿ ವಿನ್ಯಾಸದೊಂದಿಗೆ, ನಾವು ಹೆಚ್ಚು ಉತ್ತಮವಾಗಿ ಮತ್ತು ತ್ವರಿತವಾಗಿ ಲಸಿಕೆ ನೀಡಬೇಕಾಗಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡಲು ನಾವು ಅನೇಕ ಕೆಲಸಗಳನ್ನು ಮಾಡಬೇಕು. ಈ ಪ್ರಯತ್ನದ ಒಂದು ದೊಡ್ಡ ಭಾಗವಾಗಿ ವ್ಯಾಕ್ಸಿನೇಷನ್ ಹೆಚ್ಚಳ ಸೇರಿದಂತೆ ಇನ್ನೂ ಅನೇಕ ಸಲಹೆಗಳನ್ನು ಮನ ಮೋಹನ್ ಸಿಂಗ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಮುಂದಿನ ಆರು ತಿಂಗಳುಗಳಿಗೆ ಆರ್ಡರ್ ಮತ್ತು ಪೂರೈಸಬೇಕಾದ ಲಸಿಕೆ ಡೋಸ್ ಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಬೇಕು ಎಂದು ಡಾ. ಮನ್ ಮೋಹನ್ ಸಿಂಗ್ ಒತ್ತಾಯಿಸಿದ್ದಾರೆ.