Wednesday, 9th October 2024

ತ.ನಾಡಿನ ರಾಜ್ಯಪಾಲರಾಗಿ ರವೀಂದ್ರ ನಾರಾಯಣ್ ರವಿ ಅಧಿಕಾರ ಸ್ವೀಕಾರ

ಚೆನ್ನೈ: ತಮಿಳು ನಾಡಿನ ರಾಜ್ಯಪಾಲರಾಗಿ ರವೀಂದ್ರ ನಾರಾಯಣ್ ರವಿ ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ನೂತನ ರಾಜ್ಯಪಾಲರಿಗೆ ರಾಜಭವನದಲ್ಲಿ ಇಂದು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣವಚನ ಸ್ವೀಕಾರ ಸಮಾರಂಭ ಮುಗಿದ ಮೇಲೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಸಚಿವರುಗಳು ಮತ್ತು ವಿಧಾನಸಭೆ ಸ್ಪೀಕರ್ ಎಂ ಅಪ್ಪವು ಉಪಸ್ಥಿತರಿದ್ದರು.