Thursday, 12th December 2024

ತಮಿಳುನಾಡು ಕೃಷಿ ಸಚಿವ ಆರ್.ದೊರೈಕಣ್ಣು ಸೋಂಕಿಗೆ ಬಲಿ

ತಮಿಳುನಾಡು: ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಂತ ತಮಿಳುನಾಡು ಕೃಷಿ ಸಚಿವ ಆರ್.ದೊರೈಕಣ್ಣು (72)ಅವರು ಮೃತಪಟ್ಟರು.

ಆರ್.ದೊರೈಕಣ್ಣು ಶನಿವಾರ ರಾತ್ರಿ ಕೊನೆಯುಸಿರೆಳೆದರು ಎಂದು ಕಾವೇರಿ ಆಸ್ಪತ್ರೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಅರ ವಿಂದ್ ಸೆಲ್ವರಾಜ್ ತಿಳಿಸಿದ್ದಾರೆ. ಶನಿವಾರ ರಾತ್ರಿ 11.15ಕ್ಕೆ ಕೃಷಿ ಸಚಿವ ಆರ್.ದೊರೈಕಣ್ಣು ಅಗಲಿದ್ದಾರೆ. ದೊರೈಕಣ್ಣು ಅ.13 ರಂದು ವಿಲ್ಪುರಂನ ಸರ್ಕಾರಿ ವೈದ್ಯ ಕೀಯ ಕಾಲೇಜು ಆಸ್ಪತ್ರೆಯಿಂದ ಸ್ಥಳಾಂತರಗೊಂಡ ನಂತರ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿಸಿದ್ದಾರೆ.

ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ದೋರೈಕಣ್ಣು ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಪುರೋಹಿತ್, ಸರ್ವಶಕ್ತ ನಾದ ಪರಮಾತ್ಮನ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ದೊರೈಕಣ್ಣು 2006, 2011 ಮತ್ತು 2016ರಲ್ಲಿ ತಂಜಾವೂರು ಜಿಲ್ಲೆಯ ಪಾಪನಾಸಂನಿಂದ ತಮಿಳುನಾಡು ವಿಧಾನಸಭೆಗೆ ಆಯ್ಕೆ ಯಾಗಿದ್ದು, 2016ರಲ್ಲಿ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಂಪುಟಕ್ಕೆ ಸೇರಿಸಿಕೊಂಡಿದ್ದರು.

ತೀವ್ರ ಕೋವಿಡ್-19 ನಿಂದಾಗಿ ನ್ಯುಮೋನಿಯಾಗೂ ತುತ್ತಾಗಿದ್ದರು. ಸಿಟಿ ಸ್ಕ್ಯಾನಿಂಗ್ ಒಳಪಡಿಸಿದಾಗ ಶೇ.90ರಷ್ಟು ಕೊರೋನಾ ಸೋಂಕು ಅವರ ಶ್ವಾಸಕೋಶಕ್ಕೆ ತಗುಲಿತ್ತು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂತಹ ಸಚಿವ ದೊರೈಕಣ್ಣು ಶನಿವಾರ ರಾತ್ರಿ ನಿಧನರಾಗಿದ್ದಾರೆ.