ಚೆನ್ನೈ: ಪಟಾಕಿ ತಯಾರಿಸುತ್ತಿದ್ದ ಘಟಕದಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆಯೊಂದು ಶನಿವಾರ (ಜ.4) ತಮಿಳುನಾಡಿನಲ್ಲಿ(Tamil Nadu) ನಡೆದಿರುವುದಾಗಿ ವರದಿಯಾಗಿದೆ(Fireworks Unit Blast)
Explosion at firecracker unit in #Virudhunagar | According to sources, the incident occurred at Sainath Fireworks in the morning when the workers were manufacturing crackers. Chief Minister #MKStalin expressed condolences and announced solatium of four lakhs each to the family of… pic.twitter.com/szl8h3K8Kb
— TNIE Tamil Nadu (@xpresstn) January 4, 2025
ವರದಿಯ ಪ್ರಕಾರ, ಘಟನೆಯಲ್ಲಿ ಹಲವಾರು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸಂತ್ರಸ್ತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಕ್ಷಣವೇ ದೌಡಾಯಿಸಿದ್ದು,ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಪಟಾಕಿ ತಯಾರಿಸುವ ವೇಳೆ ರಾಸಾಯನಿಕ ಮಿಶ್ರಣದ ಸಂದರ್ಭದಲ್ಲಿ ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಿದ್ದಾರೆ.
ದುರಂತದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ.ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.ಇತ್ತೀಚೆಗಷ್ಟೇ ಸಿಎಂ ಸ್ಟಾಲಿನ್ ವಿರುದ್ವುನಗರಕ್ಕೆ ಭೇಟಿ ನೀಡಿ, ಪಟಾಕಿ ತಯಾರಿಕೆ ಕಾರ್ಖಾನೆ ಮಾಲೀಕರಲ್ಲಿ ದುರಂತಗಳು ನಡೆಯದಂತೆ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರು.
ವಿರುದ್ವುನಗರದಲ್ಲಿ 1,150 ಪಟಾಕಿ ತಯಾರಿಕೆ ಕಾರ್ಖಾನೆಗಳಿದ್ದು, 4 ಲಕ್ಷ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಶಿವಕಾಶಿವೊಂದರಲ್ಲೇ ದೇಶದ ಶೇ.70ರಷ್ಟು ಪಟಾಕಿ ಉತ್ಪಾದನೆಯಾಗುತ್ತದೆ ಎಂದು ವರದಿ ಮೂಲಕ ತಿಳಿದು ಬಂದಿದೆ. ಸ್ಫೋಟಗೊಂಡ ಸ್ಥಳದಿಂದ ಸುಮಾರು 500 ಮೀಟರ್ ನಿಂದ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮುನ್ನೆಚ್ಚರಿಕೆಯಾಗಿ ಒಂದು ದಿನದ ಮಟ್ಟಿಗೆ ಮುಚ್ಚಲು ತಿಳಿಸಲಾಗಿದೆ.
ಮನೆಯಲ್ಲಿ ಪಟಾಕಿ ಸ್ಪೋಟಗೊಂಡು ವ್ಯಾಪಾರಿ ಸಾವು
ಕಳೆದ ತಿಂಗಳಷ್ಟೇ ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಪಟಾಕಿ ಸಿಡಿದು ಪಟಾಕಿ ವ್ಯಾಪಾರಿ ಮೃತಪಟ್ಟ ಘಟನೆ ಸವಣೂರ ಪಟ್ಟಣದ ಮಾಲತೇಶ ನಗರದಲ್ಲಿ ಸಂಭವಿಸಿತ್ತು. ಷಣ್ಮುಖಪ್ಪ ಬಸವರಾಜ ದೇವಗಿರಿ (55) ಮೃತಪಟ್ಟ ವ್ಯಾಪಾರಿ. ಗಣೇಶ ಚತುರ್ಥಿ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡಲು ಷಣ್ಮುಖಪ್ಪ ಡಿಸಿ ಅವರಿಂದ ಲೈಸನ್ಸ್ ಪಡೆದಿದ್ದರು. ಹಬ್ಬದಂದು ಮಾರಾಟ ಮಾಡಿ ಉಳಿದ ಪಟಾಕಿಗಳನ್ನು ಮನೆಯಲ್ಲಿ ಸಂಗ್ರಹಿಸಿ ಇಡಲು ಲೈಸನ್ಸ್ ಪಡೆಯದೇ ಅಕ್ರಮವಾಗಿ ಮನೆಯಲ್ಲಿ ಇಟ್ಟಿದ್ದರು.
ಡಿ.12ರಂದು ಮಧ್ಯಾಹ್ನ ಪಟಾಕಿ ಸಂಗ್ರಹಿಸಿ ಇಟ್ಟಿದ್ದ ಸ್ಥಳದ ಪಕ್ಕದಲ್ಲಿ ಷಣ್ಮುಖಪ್ಪ ಮಲಗಿದ್ದರು. ಈ ವೇಳೆ ಆಕಸ್ಮಿಕವಾಗಿ ಪಟಾಕಿಗೆ ಬೆಂಕಿ ತಗುಲಿ ಸ್ಪೋಟಗೊಂಡು ಷಣ್ಮುಖಪ್ಪ ಅವರಿಗೆ ಗಂಭೀರ ಗಾಯಗಳಾಗಿದ್ದವು. ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿ:Delhi Teen Stabbed : ವಿದ್ಯಾರ್ಥಿಗಳ ನಡುವೆ ತರಗತಿಯಲ್ಲಿ ಮಾರಾಮಾರಿ: ಶಾಲೆಯ ಹೊರಗೆ ಸಹಪಾಠಿಯನ್ನು ಇರಿದು ಕೊಂದ!