Sunday, 8th September 2024

ಪಾಲ್ಕ್ ಕೊಲ್ಲಿಯಲ್ಲಿ ಆರು ಭಾರತೀಯ ಮೀನುಗಾರರ ಬಂಧನ

ರಾಮೇಶ್ವರಂ: ತಮಿಳುನಾಡಿನ ಆರು ಭಾರತೀಯ ಮೀನುಗಾರ ರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದ್ದು, ಅವರ ದೋಣಿಯನ್ನು ವಶಪಡಿಸಿಕೊಂಡಿದೆ. ಪಾಲ್ಕ್ ಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರನ್ನು ಬಂಧಿಸಲಾಗಿದೆ.

ಗಡಿ ದಾಟಿದ ಕಾರಣ, ಶ್ರೀಲಂಕಾ ನೌಕಾಪಡೆಯು ನಿಶಾಂತ್ ಒಡೆತನದ IND TN 10 MM 2573 ನ ಒಂದು ಬೋಟ್‌ ಜೊತೆಗೆ 6 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡಿದೆ.

ಇದು ತಿಂಗಳ ಮೂರನೇ ಘಟನೆಯಾಗಿದ್ದು, ಆ.22 ರಂದು ಶ್ರೀಲಂಕಾದ ನೀರಿನಲ್ಲಿ ಅಕ್ರಮ ಮೀನುಗಾರಿಕೆ ಯಲ್ಲಿ ತೊಡಗಿದ್ದ ಕ್ಕಾಗಿ ಹತ್ತು ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಮತ್ತು ಆ.10 ರಂದು ನಡೆದಿದ್ದು, ತಮಿಳು ನಾಡಿನ ಒಂದು ಯಾಂತ್ರೀಕೃತ ಮೀನುಗಾರಿಕಾ ಬೋಟ್ ಮತ್ತು 9 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯ ವಶಕ್ಕೆ ತೆಗೆದುಕೊಂಡಿತು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಸಂಯೋಜಕ ಓ ಪನ್ನೀರಸೆಲ್ವಂ ಅವರು ಮೀನುಗಾರರ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಒತ್ತಾಯಿಸಿದ್ದರು.

ಈ ಬೆನ್ನಲ್ಲೇ 6 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ.

error: Content is protected !!