‘ತಮಿಳ್ ತಾಯ್ ವಾಳ್ತು’ ಕೇವಲ ಪ್ರಾರ್ಥನಾ ಗೀತೆ. ರಾಷ್ಟ್ರಗೀತೆ ಅಲ್ಲ. ಈ ಹಾಡು ಹಾಡುವ ವೇಳೆ ಎಲ್ಲರೂ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಬೆನ್ನಲ್ಲೇ ತಮಿಳುನಾಡು ಸರ್ಕಾರ ‘ತಮಿಳ್ ತಾಯ್ ವಾಳ್ತು’ಗೆ ನಾಡಗೀತೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ.
55 ಸೆಕೆಂಡುಗಳ ಈ ಹಾಡನ್ನು ಹಾಡುವಾಗ ವಿಕಲಚೇತನರನ್ನು ಹೊರತುಪಡಿಸಿ ಎಲ್ಲರೂ ಕಡ್ಡಾಯವಾಗಿ ಎದ್ದು ನಿಲ್ಲಬೇಕು ಎಂದು ರಾಜ್ಯ ಸರ್ಕಾರ ಆದೇಶ(ಜಿಒ) ಹೊರಡಿಸಿರುವುದಾಗಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತಿಳಿಸಿದ್ದಾರೆ.