ಚೆನ್ನೈ: ತಮಿಳುನಾಡಿನ ಹಲವು ಭಾಗಗಳಲ್ಲಿ ಕಳೆದ ಸೋಮವಾರದಿಂದ ಧಾರಾಕಾರ ಮಳೆಯಾಗುತ್ತಿದ್ದು, ಜನವರಿ 14ರವರೆಗೂ ವರುಣನ ಅಬ್ಬರ ಮುಂದುವರೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ತಮಿಳುನಾಡಿನ ಅತಿರಾಮಪಟ್ಟಣಂ (13.5 ಸೆಂ.ಮೀ), ಅರಿಯಲೂರು (10 ಸೆಂ.ಮೀ), ನಾಗಪಟ್ಟಣಂ (8 ಸೆಂ.ಮೀ) ಮತ್ತು ಕಾರೈ ಕಲ್ನಲ್ಲಿ (6.3 ಸೆಂ.ಮೀ.) ಅತಿ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ಟ್ವೀಟ್ ಮಾಡಿದೆ. ತಿರುನೆಲ್ವೇಲಿ, ಕನ್ಯಾಕುಮಾರಿ, ಮಧುರೈ, ತೂತುಕುಡಿ, ವಿರುಧುನಗರ ಮತ್ತು ರಾಮನಾಥಪುರಂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಯಾಗಲಿದೆ.