Saturday, 23rd November 2024

ತಾಂತ್ರಿಕ ದೋಷ: ಎನ್ ಎಸ್ ಇ ವಹಿವಾಟು ಸ್ಥಗಿತ

ಮುಂಬಯಿ: ಎನ್ ಎಸ್ ಇ ವಹಿವಾಟನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬುಧವಾರ ಸ್ಥಗಿತಗೊಂಡಿರುವುದಾಗಿ ತಿಳಿಸಿದೆ.

ಎನ್ ಎಸ್ ಇ ಟೆಲಿಕಾಂ ಮೂಲಕ ಎರಡು ಸರ್ವೀಸ್ ಪ್ರೊವೈಡರ್ ಗಳ ಸಂಪರ್ಕ ಹೊಂದಿದೆ. ತಾಂತ್ರಿಕ ದೋಷದಿಂದಾಗಿ ಎನ್ ಎಸ್ ಇ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ಎನ್ ಎಸ್ ಇ ಟ್ವೀಟರ್ ನಲ್ಲಿ ತಿಳಿಸಿದೆ.

ಎನ್ ಎಸ್ ಇ ಎಲ್ಲಾ ವಹಿವಾಟನ್ನು 11.40ರವರೆಗೆ ಸ್ಥಗಿತಗೊಳಿಸಿದ್ದು, ತಾಂತ್ರಿಕ ದೋಷ ಪರಿಹಾರವಾದ ಕೂಡಲೇ ವಹಿವಾಟು ಆರಂಭಿಸುವುದಾಗಿ ಎನ್ ಎಸ್ ಇ ಹೇಳಿದೆ. ನಿಫ್ಟಿ ಸೂಚ್ಯಂಕ 14,820ರ ಗಡಿ ತಲುಪಿತ್ತು. ನಿಫ್ಟಿ ಮತ್ತು ನಿಫ್ಟಿ ಬ್ಯಾಂಕ್ ಫ್ಯೂಚರ್ಸ್ ಅಪ್ ಡೇಟ್ ನಿರಾತಂಕವಾಗಿ ನಡೆಯುತ್ತಿದೆ ಎಂದು ತಿಳಿಸಿದೆ.

ಭಾರತದ ಈಕ್ವಿಟಿ ಬೆಲೆ ಬುಧವಾರ ಭರ್ಜರಿ ಏರಿಕೆಯಾಗಿದ್ದು, ಇದರಿಂದಾಗಿ ಎಚ್ ಡಿಎಫ್ ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಆಯಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಫ್ಟಿ ಹೆಚ್ಚಿನ ಲಾಭಗಳಿಸಿದೆ.