Thursday, 24th October 2024

ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಕುಸಿತ

ಹೈದರಾಬಾದ್: ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ ಭಾಗಶಃ ಕುಸಿದಿದೆ. ಈ ಕಟ್ಟಡವನ್ನು 1913ರಲ್ಲಿ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್ ನಿರ್ಮಿಸಿದ್ದರು.

ಪ್ರಾಚೀನ ಕಟ್ಟಡದ ಒಳಗೆ ಕುಳಿತಿದ್ದ ಸಿಬ್ಬಂದಿ ಕುಸಿತದ ದೊಡ್ಡ ಸದ್ದು ಕೇಳಿ ಬಂದ ನಂತರ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಓಡಿಹೋದರು. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಹೈದರಾಬಾದ್ ಸಿಟಿ ಟೌನ್ ಹಾಲ್ ಆಗಿ ಕಟ್ಟಡವನ್ನು ಬಳಸಲಾಗುತ್ತಿತ್ತು.

ಸ್ವಾತಂತ್ರ್ಯದ ನಂತರ, ಈ ಕಟ್ಟಡವನ್ನು ಅಸೆಂಬ್ಲಿ ಹಾಲ್ ಆಗಿ ಬಳಸಲು ಆರಂಭಿಸಲಾಯಿತು. ನಂತರ ಅಸೆಂಬ್ಲಿ ನಡೆಸಲು ಹೊಸ ಕಟ್ಟಡ ನಿರ್ಮಿಸಿದರೂ, ಕಚೇರಿ ಸಿಬ್ಬಂದಿ ಹಳೆಯ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದರು.