Thursday, 19th September 2024

Terror attack: ಜಮ್ಮು-ಕಾಶ್ಮೀರ ಎನ್‌ಕೌಂಟರ್‌- ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

terror attack

ಶ್ರೀನಗರ: ಜಮ್ಮು-ಕಾಶ್ಮೀರ(Jammu-Kashmir)ದಲ್ಲಿ ಉಗ್ರರ ಉಪಟಳ(Terror attack) ದಿನೇ ದಿನೆ ಹೆಚ್ಚಾಗುತ್ತಿದ್ದು, ಸೇನಾ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ. ನೌಶೆರಾದಲ್ಲಿ ನಿನ್ನೆ ತಡರಾತ್ರಿ ಉಗ್ರರು ಗಡಿಯೊಳಗೆ ನುಗ್ಗಲು ಯತ್ನಿಸುತ್ತಿರುವ ಬಗ್ಗೆ ಸೇನೆಗೆ ಮಾಹಿತಿ ದೊರೆತಿತ್ತು. ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದ ಸೇನೆ ಉಗ್ರರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದೆ. ಅಲ್ಲದೇ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಇನ್ನು ಈ ಕುರಿತು ಸೇನೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದ್ದು, ಕನಿಷ್ಠ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಗುಪ್ತಚರ ಇಲಾಖೆ ಮತ್ತು ಜಮ್ಮು ಪೊಲೀಸರು ನೀಡಿದ್ದ ಅಧಿಕೃತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ನಿನ್ನೆ ತಡರಾತ್ರಿ ಉಗ್ರರು ಒಳನುಸುಳಲು ಯತ್ನಿಸಿದ್ದರು. ಇದನ್ನು ತಡೆಯಲು ಸೇನೆ ಕಾರ್ಯಚರಣೆ ಕೈಗೆತ್ತಿಕೊಂಡಿತ್ತು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

ಇನ್ನು ಹತರು ಯಾವ ಉಗ್ರ ಸಂಘಟನೆಗೆ ಸೇರಿದರವರೆಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳದಿಂದ ಎರಡು AK-47 ಮತ್ತು ಒಂದು ಪಿಸ್ತೂಲ್ ಸೇರಿದಂತೆ ಅಂಗಡಿಗಳಂತಹ ದೊಡ್ಡ ಪ್ರಮಾಣದ ಯುದ್ಧವನ್ನು ಇದುವರೆಗೆ ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಸೇನೆ ಹೇಳಿದೆ.

ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳಿವೆ ಎನ್ನುವಾಗಲೇ ಮೇಲಿಂದ ಮೇಲೆ ಉಗ್ರರ ದಾಳಿ ನಡೆಯುತ್ತಿರುವುದು ಸೇನೆಗೆ ಬಹುದೊಡ್ಡ ಸವಾಲಾಗಿದೆ. ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾಸಭೆ ಚುನಾವಣೆಗೆ ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಸೆ.18, ಸೆ.25 ಮತ್ತುಅ.1ರಂದು ದಿನಾಂಕ ನಿಗದಿಪಡಿಸಲಾಗಿದೆ.  ವಿಧಾನಸಭಾ ಚುನಾವಣೆಯ ದಿನಾಂಕಗಳಲ್ಲಿ ಚುನಾವಣಾ ಆಯೋಗವು ಕೆಲವು ಬದಲಾವಣೆಗಳನ್ನು ಮಾಡಿದೆ. ಚುನಾವಣಾ ಫಲಿತಾಂಶವನ್ನು ಅಕ್ಟೋಬರ್ 4 ರ ಬದಲು ಅಕ್ಟೋಬರ್ 8 ರಂದು ಪ್ರಕಟಿಸಲು ಇಸಿ ನಿರ್ಧರಿಸಿದೆ.

ಸೆಪ್ಟೆಂಬರ್ 18 ರಂದು ರಾಜ್ಯದ 24 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ.  ಸೆಪ್ಟೆಂಬರ್ 25 ರಂದು ಜಮ್ಮು ಮತ್ತು ಕಾಶ್ಮೀರದ 26 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 1 ರಂದು ಜಮ್ಮು ಮತ್ತು ಕಾಶ್ಮೀರದ 40 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಇನ್ನೂ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ಇದೇ ಮೊದಲ ಬಾರಿ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆ ಬಿಜೆಪಿಗೆ ನಿರ್ಣಾಯಕವಾಗಿದೆ.

ಈ ಸುದ್ದಿಯನ್ನೂ ಓದಿ: ಜಮ್ಮು-ಕಾಶ್ಮೀರದ ಎರಡು ಮುಸ್ಲಿಂ ಸಂಘಟನೆಗಳ ಮೇಲೆ ಐದು ವರ್ಷ ನಿಷೇಧ

Leave a Reply

Your email address will not be published. Required fields are marked *