ಶ್ರೀನಗರ: ಉತ್ತರಕಾಶ್ಮೀರದ ಸೊಪೋರ್ನ ಡಾಂಗಿವಾಚಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಶನಿವಾರ ಸಂಜೆ ಇಬ್ಬರು ಭಯೋತ್ಪಾದಕರ (Terrorist Arrested) ಸಹಚರರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಜಂಟಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರ (J&K Police) ಪೊಲೀಸರ ಜಂಟಿ ತಂಡ, (Indian Army) ಸೇನೆಯ 32RR ಮತ್ತು 92Bn CRPF ತಂಡ ಭಾಗವಹಿಸಿದ್ದವು. ಸೋಪೋರ್ನ ರಫಿಯಾಬಾದ್ ಪ್ರದೇಶದ ಯಾರ್ಬಗ್ನಲ್ಲಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. (Jammu & Kashmir)
ಬಂಧಿತರಿಂದ ಒಂದು ಪಿಸ್ತೂಲ್, ಐದು 9 ಎಂಎಂ ಸುತ್ತುಗಳು, ಎರಡು ಗ್ರೆನೇಡ್ಗಳು ಮತ್ತು 10,600 ರೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಅನಂತನಾಗ್ನ ಅರ್ವಾನಿ ನಿವಾಸಿಗಳಾದ ಗುಲಾಮ್ ಮೊಹಮ್ಮದ್ ಭಟ್ ಅವರ ಪುತ್ರ ರಶೀದ್ ಅಹ್ಮದ್ ಭಟ್ ಮತ್ತು ಸಾಜಿದ್ ಇಸ್ಮಾಯಿಲ್ ಹರೂ ಎಂದು ಗುರುತಿಸಲಾಗಿದೆ.
Sopore Police apprehended two suspected persons, arms ammunition recovered.https://t.co/exqpkEdIH5@JmuKmrPolice @KashmirPolice @DIGBaramulla @DivyaDev_ips pic.twitter.com/qNUhUOZnDF
— Sopore Police (@SoporePolice) December 22, 2024
ಇದಕ್ಕೂ ಮುನ್ನ ಬಂಡಿಪೋರಾದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಭಯೋತ್ಪಾದಕರ ಸಹಚರನನ್ನು ಸೇನಾ ಸಿಬ್ಬಂದಿಗಳು ಬಂಧಿಸಿದ್ದಾರೆ. ಸೇನಾ ಸಿಬ್ಬಂದಿಗಳು ಬಂಡಿಪೋರಾದ ನಾಡಿಹಾಲ್ ಪ್ರದೇಶದ ಮೊಬೈಲ್ ಚೆಕ್ ಪೋಸ್ಟ್ನಲ್ಲಿ ತಪಾಸಣೆ ಮಾಡುವಾಗ ಆರೋಪಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಸಿಕ್ಕಿ ಬಿದ್ದಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿದಾಗ ನಾಡಿಹಾಲ್ನಲ್ಲಿ ಬಂಡಿಪೋರಾ ಪೊಲೀಸ್ ಹಾಗೂ ಸೇನೆಯ 14 ರಾಷ್ಟ್ರೀಯ ರೈಫಲ್ಸ್ (ಆರ್ಆರ್) ಜಂಟಿ ತಪಾಸಣಾ ನಸಡೆಸಿದಾಗ ಶಂಕಿತ ಸ್ಥಳದಿಂದ ಶಂಕಿತನು ಪಲಾಯನ ಮಾಡಲು ಪ್ರಯತ್ನಿಸಿದನು ಆದರೆ ಭದ್ರತಾ ಪಡೆಗಳಿಂದ ತಂತ್ರಗಾರಿಕೆಯಿಂದ ತಡೆಹಿಡಿದು ಬಂಧಿಸಲಾಯಿತು. ಶೋಧದ ವೇಳೆ ಶಂಕಿತನ ಬಳಿಯಿದ್ದ ಪಿಸ್ತೂಲ್, ಹ್ಯಾಂಡ್ ಗ್ರೆನೇಡ್ ಮತ್ತು 15 ಸುತ್ತಿನ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚಿನ ತನಿಖೆ ಪಡೆಯಲು ಸೋಪೋರ್ ಮತ್ತು ಬಂಡಿಪೋರಾ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ಹೆಚ್ಚಾಗಿದ್ದು ಬೆಹಿಬಾಗ್ ಪ್ರದೇಶದ ಕಡ್ಡರ್ನಲ್ಲಿ ಶಂಕಿತ ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ತಕ್ಷಣ ಭದ್ರತಾ ಪಡೆ ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Encounters: ಜಮ್ಮು & ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ; ಪ್ರತ್ಯೇಕ ಎನ್ಕೌಂಟರ್ನಲ್ಲಿ ಮೂವರು ಉಗ್ರರ ಸಾವು