ನವದೆಹಲಿ: ಸುಮಾರು ಎರಡು ದಶಕಗಳ ಹಿಂದೆ ಸಬರಮತಿ ಎಕ್ಸ್ಪ್ರೆಸ್ ದುರಂತದ ಬಗೆಗಿನ ಕಥಾ ಹಂದರವನ್ನಿಟ್ಟುಕೊಂಡು ತೆರೆಕಂಡಿರುವ ʻದಿ ಸಬರಮತಿ ರಿಪೋರ್ಟ್ʼ(The Sabaramati Report) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾದ ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ(PM Narendra Modi)ಯವರೇ ಮೆಚ್ಚುಗೆ ಮಾತನಾಡಿದ್ದಾರೆ. ದಿ ಸಬರಮತಿ ರಿಪೋರ್ಟ್ ಚಿತ್ರವನ್ನು ಹಾಡಿ ಹೊಗಳಿರುವ ಪ್ರಧಾನಿ ಮೋದಿ “ಸತ್ಯ ಹೊರಬರುತ್ತಿದೆ” ಎಂದು ಹೇಳಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ವೊಂದನ್ನು ಮಾಡಿರುವ ಅವರು, “ಚೆನ್ನಾಗಿ ಹೇಳಿದೆ. ಈ ಸತ್ಯ ಹೊರಬರುತ್ತಿರುವುದು ಒಳ್ಳೆಯದೇ, ಅದೂ ಕೂಡ ಒಂದು ರೀತಿಯಲ್ಲಿ ಜನಸಾಮಾನ್ಯರು ನೋಡುವಂತಾಗಿದೆ. ಒಂದು ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ. ಅಂತಿಮವಾಗಿ, ಸತ್ಯಗಳು ಎಂದಾದರೂ ಒಂದು ದಿನ ಹೊರಬರುತ್ತವೆ! ” ಎಂದು ಹೇಳಿದ್ದಾರೆ.
Well said. It is good that this truth is coming out, and that too in a way common people can see it.
— Narendra Modi (@narendramodi) November 17, 2024
A fake narrative can persist only for a limited period of time. Eventually, the facts will always come out! https://t.co/8XXo5hQe2y
ಫೆಬ್ರವರಿ 27, 2002 ರಂದು ಸಬರಮತಿ ಎಕ್ಸ್ಪ್ರೆಸ್ನಲ್ಲಿ ನಡೆದ ದುರಂತ ಘಟನೆ ಮತ್ತು ಅದು ಭಾರತದ ಸಾಮಾಜಿಕ-ಸಾಂಸ್ಕೃತಿ ಮೇಲೆ ಬೀರಿದ ಪರಿಣಾಮದ ಬಗ್ಗೆ ಯಾರಿಗೂ ತಿಳಿದಿರದ ಸತ್ಯವನ್ನು ಹೊರಹಾಕುತ್ತಾ ಕಥೆ ಸಾಗುತ್ತದೆ. ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಅವರು ಈ ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಹೆಸರು ಕೇಳುತ್ತಿದ್ದಂತೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗುತ್ತದೆ. ವಿಕ್ರಾಂತ್ ಮಾಸ್ಸಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಸಿನಿಮಾವನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್ ಪ್ರಸ್ತುತಪಡಿಸಿದ್ದು, ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಿಸಿದ್ದಾರೆ. ನವೆಂಬರ್ 15, 2024 ರಂದು ತೆರೆಕಂಡಿದೆ.
ಏನಿದು ಸಬರಮತಿ ಎಕ್ಸ್ಪ್ರೆಸ್ ದುರಂತ?
2002 ಫೆಬ್ರವರಿ 27 ರಂದು ಅಯೋಧ್ಯೆಯಿಂದ ವಾರಣಾಸಿಗೆ ಹೋಗುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಲಾಯ್ತು. ಯಾತ್ರಾರ್ಥಿಗಳು ಸ್ವಯಂಸೇವಕರು ಸೇರಿದಂತೆ ರೈಲಿನಲ್ಲಿ ಸುಮಾರು 1,700 ಪ್ರಯಾಣಿಕರಿದ್ದರು. ರೈಲು , ಗೋಧ್ರಾ ಜಂಕ್ಷನ್ ರೈಲು ನಿಲ್ದಾಣವನ್ನು ದಾಟಿದ ನಂತರ ಸುಮಾರು 2,000 ಜನರ ಗುಂಪೊಂದು ರೈಲಿನಲ್ಲಿದ್ದವರ ಮೇಲೆ ದಾಳಿ ನಡೆಸಿತು. ಕಲ್ಲು ತೂರಾಟದಿಂದ ಆರಂಭವಾದ ಈ ಹಿಂಸೆ ಆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚುವವರೆಗೂ ಮುಂದುವರೆಯಿತು. 4 ಬೋಗಿಗಳಿಗೆ ವ್ಯಾಪಿಸಿದ ಬೆಂಕಿಗೆ ಸಿಲುಕಿ 59 ಮಂದಿ ಸಜೀವ ದಹನವಾಗಿದ್ದರು. ಈ ಘಟನೆ ನಂತರ ನಾಗರಿಕ ನ್ಯಾಯಮಂಡಳಿಯು ಇದು ಬೆಂಕಿ ಆಕಸ್ಮಿಕ ಎಂದರೆ, ನಾನಾವತಿ-ಮೆಹ್ತಾ ಆಯೋಗವು 2008 ರ ವರದಿಯಲ್ಲಿ ಇದೊಂದು ಯೋಜಿತ ಪಿತೂರಿ ಎಂದಿತ್ತು
ಈ ಸುದ್ದಿಯನ್ನೂ ಓದಿ: Vikrant Massey: ʻದಿ ಸಬರಮತಿ ರಿಪೋರ್ಟ್ʼ ಸಿನಿಮಾದ ನಂತರ ನನ್ನ 9 ತಿಂಗಳ ಮಗನಿಗೂ ಬೆದರಿಕೆ ಬರ್ತಾ ಇದೆ; ನಟ ವಿಕ್ರಾಂತ್ ಮಾಸ್ಸೆ ಆತಂಕ