Friday, 20th September 2024

#Budget2020: ದುಬಾರಿಯಾಗಲಿವೆ ಈ ಗ್ಯಾಜೆಟ್‌ಗಳು & ಎಲೆಕ್ಟ್ರಾನಿಕ್ ವಸ್ತುಗಳು

2020-21ರ ಬಜೆಟ್‌ ಘೋಷಣೆಯಾಗಿದ್ದು, ಕೆಲ ವಸ್ತುಗಳು ಅಗ್ಗ ಹಾಗೂ ಕೆಲ ವಸ್ತುಗಳು ತುಟ್ಟಿಯಾಗಿವೆ. ಗೃಹಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಈ ಕಾರಣದಿಂದ ಇವುಗಳ ಬೆಲೆಗಳಲ್ಲಿ ಏರಿಕೆ ಕಂಡುಬರಲಿದೆ.

ರೆಫ್ರಿಜರೇಟರ್‌ಗಳು ಹಾಗೂ ಏರ್‌ ಕಂಡೀಷನರ್‌ ಕಂಪ್ರೆಸ್ಸರ್‌ಗಳ ಮೇಲಿನ ತರಿಗೆಯನ್ನು 10%ನಿಂದ 12.5%ಗೆ ಏರಿಕೆ ಮಾಡಲಾಗಿದ್ದರೆ, ಸಣ್ಣ ಮೋಟರ್‌ಗಳ ಮೇಲಿನ ಕರವನ್ನು 7.5% ರಿಂದ 10%ಗೆ ವರ್ಧಿಸಲಾಗಿದೆ. ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸುವ ಸಲುವಾಗಿ ಆಮದು ಮಾಡಿಕೊಳ್ಳಲಾದ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಅಥವಾ ಅವುಗಳ ಭಾಗಗಳ ಮೇಲೆ ಸುಂಕ ಏರಿಕೆ ಮಾಡಲಾಗಿದೆ.

ದುಬಾರಿ

ಟೇಬಲ್‌ ಫ್ಯಾನ್‌, ಸೀಲಿಂಗ್ ಫ್ಯಾನ್‌
& ಪೆಡಸ್ಟಲ್ ಫ್ಯಾನ್‌.

ವಾಷಿಂಗ್‌ ಮಷೀನ್‌, ಏರ್‌ ಕಂಡೀಷನರ್‌‌, ಆಮದು ಮಾಡಿಕೊಳ್ಳಲಾದ ರೆಫ್ರಿಜರೇಟರ್‌ಗಳು.

ಹೇರ್‌ ಡ್ರೈಯರ್‌ಗಳು ಹಾಗೂ ಸಂಬಂಧಿತ ವಸ್ತುಗಳು.

ಎಲೆಕ್ಟ್ರಿಕ್ ಇಸ್ರಿಪೆಟ್ಟಿಗೆಗಳು.

ಫೀಚರ್‌ ಫೋನ್‌ಗಳು.

ಮೊಬೈಲ್‌ ಫೋನ್‌ಗಳಲ್ಲಿ ಬಳಸುವ ಪ್ರಿಂಟೆಡ್‌ ಸರ್ಕ್ಯೂಟ್‌ ಬೋರ್ಡ್ ಅಸೆಂಬ್ಲಿ (PCBA), ಡಿಸ್‌ಪ್ಲೇ ಪ್ಯಾನಲ್‌ & ಟಚ್‌ ಅಸೆಂಬ್ಲಿ, ಫಿಂಗರ್‌ ಪ್ರಿಂಟ್‌ ರೀಡರ್‌ಗಳು.

ಆಮದು ಮಾಡಿಕೊಳ್ಳಲಾದ ಹೆಡ್‌ ಫೋನ್‌ಗಳು & ಇಯರ್‌ ಫೋನ್‌ಗಳು

ಅಗ್ಗ

ಮೈಕ್ರೋಫೋನ್‌ಗಳು

ದೇಶೀಯವಾಗಿ ಉತ್ಪಾದಿಸಲಾದ ಎಲೆಕ್ಟ್ರಿಕ್‌ ವಾಹನಗಳು