Saturday, 21st December 2024

ಇಂದಿನಿಂದ ಮೂರನೇ ಮಹಾಯುದ್ಧ ಆರಂಭ: ಭಾರತದ ನ್ಯಾಸ್ಟ್ರಾಡಾಮಸ್ ಕುಶಾಲ್ ಕುಮಾರ್ ಭವಿಷ್ಯ

ಇಂದಿನಿಂದ ಮೂರನೇ ಮಹಾಯುದ್ಧ ಆರಂಭವಾಗಿದೆ ಎಂದು ಭಾರತದ ನ್ಯಾಸ್ಟ್ರಾಡಾಮಸ್ ಎಂದೇ ಖ್ಯಾತರಾದ ಕುಶಾಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.

ಕುಶಾಲ್ ಕುಮಾರ್ ಮೂರನೇ ಮಹಾಯುದ್ಧ ಆರಂಭದ ಕುರಿತು ಕೆಲವು ದಿನಗಳಿಂದ ನೀಡುತ್ತಿದ್ದ ಭವಿಷ್ಯ ಹೇಳುತ್ತಿದ್ದು, ಈಗ ಹೊಸದಾಗಿ ದಿನಾಂಕ ಘೋಷಿಸಿರುವ ಅವರು, ಆಗಸ್ಟ್ 4 ಅಥವಾ 5ರಿಂದ ಮೂರನೇ ಮಹಾಯುದ್ಧ ಆರಂಭಗೊಳ್ಳಲಿದೆ ಎಂದು ಘೋಷಿಸಿದ್ದಾರೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ, ರಷ್ಯಾ-ಉಕ್ರೇನ್ ಯುದ್ಧಗಳ ಬಗ್ಗೆ ಭವಿಷ್ಯ ನುಡಿದಿದ್ದ ಕುಶಾಲ್ ಕುಮಾರ್ ಈಗ ಜಾಗತಿಕ ಮಟ್ಟದ ಅತ್ಯಂತ ಭೀಕರ ಹಾಗೂ ಸುದೀರ್ಘ ಮೂರನೇ ಮಹಾಯುದ್ಧದ ಸೂಚನೆ ನೀಡಿದ್ದಾರೆ.

ಕುಶಾಲ್ ಕುಮಾರ್ ಇದಕ್ಕೂ ಮುನ್ನ ಜುಲೈ 18ರಿಂದ ಮೂರನೇ ಮಹಾಯುದ್ಧ ಆರಂಭಗೊಳ್ಳಲಿದೆ ಎಂದು ಹೇಳಿದ್ದರು. ಆದರೆ ಯಾವುದೇ ಘಟನೆ ನಡೆಯಲಿಲ್ಲ. ನಂತರ ಜುಲೈ 26 ಮತ್ತು 28ರಂದು ಮತ್ತೊಂದು ದಿನಾಂಕ ಘೋಷಿಸಿದರು ಆಗಲೂ ಏನೂ ಆಗದೇ ಅವರ ಭವಿಷ್ಯವಾಣಿಗಳು ಸುಳ್ಳಾಗಿದ್ದವು. ಇದೀಗ ಮೂರನೇ ಮಹಾಯುದ್ಧದ ದಿನಾಂಕ ಘೋಷಿಸಿದ್ದಾರೆ.

ಕುಶಾಲ್ ಕುಮಾರ್ ವೇದಿಕ್ ಜ್ಯೋತಿಷಿಯಾಗಿದ್ದು, ಹರಿಯಾಣದ ಪಂಚಕುಲಾದ ನಿವಾಸಿಯಾಗಿದ್ದಾರೆ. ಇವರು ನುಡಿದ ಜ್ಯೋತಿಷ್ಯದ ವರದಿಗಳು ಜಾಗತಿಕ ಮಟ್ಟದ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತವೆ.