ನಾಸಿಕ್: ಮಹಾರಾಷ್ಟ್ರ ರಾಜ್ಯದ ಈ ಜಿಲ್ಲೆಯ ಮಾರ್ಕೆಟ್ನಲ್ಲಿ ಒಂದು ಗಂಟೆಗಿಂತ ಹೆಚ್ಚು ಹೊತ್ತು ಕಾಲ ಕಳೆದರೂ ಫೈನ್ ಬೀಳಲಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಎಲ್ಲ ಮಾರುಕಟ್ಟೆಗಳಿಗೆ ಬರುವ ಜನರಿಗೆ ಎರಡು ಪ್ರತ್ಯೇಕ ದ್ವಾರಗಳನ್ನು ನಿರ್ಮಿಸಲಾಗಿದೆ. ಒಂದು ದ್ವಾರದಲ್ಲಿ ಬರುವವರು ಇನ್ನೊಂದು ದ್ವಾರದಲ್ಲಿ ಹೋಗಬೇಕು. ಮಾರುಕಟ್ಟೆಗೆ ಬರುವಾಗ ಐದು ರೂಪಾಯಿಯ ಟಿಕೆಟ್ ಖರೀದಿಸಬೇಕು. ಅದರಲ್ಲಿ ಸಮಯವನ್ನು ನಮೂದಿಸಲಾಗಿರುತ್ತದೆ. ವಾಪಾಸು ಹೋಗುವಾದ ಟಿಕೆಟ್ ಪರಿಶೀಲಿಸಲಾಗುವುದು. ಯಾರು ಒಂದು ಗಂಟೆಗಿಂತ ಹೆಚ್ಚು ಹೊತ್ತು ಮಾರುಕಟ್ಟೆಯಲ್ಲಿರುತ್ತಾರೋ ಅವರಿಗೆ ತಲಾ 500 ರೂಪಾಯಿ ದಂಡ ವಿಧಿಸ ಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ನಾಸಿಕ್ನಲ್ಲಿ ಸೋಮವಾರ 2,847 ಕರೋನಾ ಪ್ರಕರಣಗಳು ದೃಢವಾಗಿವೆ. ಈ ಮೂಲಕ ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 1,74,682ಕ್ಕೆ ಏರಿಕೆಯಾಗಿದೆ.