Sunday, 15th December 2024

ಸಿಎನ್‌ಜಿ ಪಂಪ್‌ನ ಮೂವರು ಉದ್ಯೋಗಿಗಳ ಹತ್ಯೆ

ಗುರುಗ್ರಾಮ್: ಸೆಕ್ಟರ್-31ರಲ್ಲಿನ ಸಿಎನ್‌ಜಿ ಪಂಪ್‌ನ ಮೂವರು ಉದ್ಯೋಗಿಗಳನ್ನು ಸೋಮವಾರ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ. ಹರಿತವಾದ ಆಯುಧಗಳಿಂದ ದಾಳಿ ನಡೆಸಲಾಗಿದೆ.

ಮೃತರು ಉತ್ತರ ಪ್ರದೇಶ ಮೂಲದ ಭೂಪೇಂದ್ರ, ಪುಷ್ಪೇಂದ್ರ ಹಾಗೂ ನರೇಶ್ ಎಂದು ಗುರುತಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳ ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.

ದರೋಡೆಯೇ ಈ ಕೃತ್ಯದ ಹಿಂದಿನ ಉದ್ದೇಶ ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಇತರ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಎಫ್‌ಐಆರ್ ದಾಖಲಾಗಬೇಕಿದೆ.