Sunday, 15th December 2024

ಹೈದರಾಬಾದ್ ಬ್ರೇಕಿಂಗ್: ಮೂರು ಓಮಿಕ್ರಾನ್ ಪ್ರಕರಣಗಳು ಪತ್ತೆ

hyderabad

ಹೈದರಾಬಾದ್: ಹೈದರಾಬಾದ್ ನ ರಾಜೀವ್ ಗಾಂದಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.

ಕೆನ್ಯಾದಿಂದ ಬಂದ 24 ವರ್ಷದ ಯುವತಿಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪರೀಕ್ಷೆ ಮಾಡಿಸಿ ದಾಗ ಓಮಿಕ್ರಾನ್ ಪತ್ತೆಯಾಗಿದೆ. ಅವರನ್ನು ಟಿಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು ಅವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಆಕೆಯ ತಂದೆ ಮತ್ತು ಮಾವನನ್ನು ಟೊಲಿಚೊವ್ಲಿಯಲ್ಲಿ ಪ್ರತ್ಯೇಕ ವಾಗಿರಿಸಲಾಗಿದೆ.

23 ವರ್ಷದ ಸೊಮಾಲಿಯಾ ದೇಶದ ಯುವಕನಾಗಿದ್ದು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಓಮಿಕ್ರಾನ್ ರೂಪಾಂತರಿ ಪಾಸಿಟಿವ್ ವೈರಸ್ ತಗುಲಿರುವುದು ಪತ್ತೆಯಾಗಿದೆ.

ಏಳು ವರ್ಷದ ಬಾಲಕ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕೋವಿಡ್ ಪರೀಕ್ಷೆಗೆ ಸ್ಯಾಂಪಲ್ ಕೊಟ್ಟು ವಿಮಾನದಲ್ಲಿ ಪಶ್ಚಿಮ ಬಂಗಾಳಕ್ಕೆ ಪೋಷಕರ ಜೊತೆ ಹೋಗಿದ್ದಾನೆ.

ಕೋವಿಡ್ ಮಾರ್ಗಸೂಚಿಯನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಆರೋಗ್ಯ ನಿರ್ದೇಶಕ ಡಾ ಜಿಎಸ್ ರಾವ್ ಹೇಳುತ್ತಾರೆ.

ತೆಲಂಗಾಣದಲ್ಲಿ ಸ್ಥಳೀಯ ಜನರಲ್ಲಿ ಇದುವರೆಗೆ ಓಮಿಕ್ರಾನ್ ಕಂಡುಬಂದಿಲ್ಲ, ತೆಲಂಗಾಣದಲ್ಲಿ ಕಂಡುಬಂದ ಎರಡೂ ಕೇಸುಗಳು ವಿದೇಶಗಳಿಂದ ಬಂದವರಲ್ಲಿ ಗೋಚರಿಸಿದೆ ಎಂದು ಹೇಳಿದ್ದಾರೆ.