Tuesday, 26th November 2024

Tips for Solo Travellers: ಏಕಾಂಗಿ ಪ್ರವಾಸ; ಮಹಿಳೆಯರೇ ಪಾಲಿಸಿ ಸ್ಮಾರ್ಟ್ ಯೋಜನೆ

Tips for Solo Travelers

ಮಹಿಳೆಯರೇ ಏಕಾಂಗಿಯಾಗಿ ಪ್ರವಾಸ ಹೊರಟಿದ್ದೀರಾ ಹಾಗಿದ್ದರೆ ಬಜೆಟ್ (Tips for Solo Travellers) ಮೇಲೆ ಗಮನವಿರಲಿ. ಸಾಮಾನ್ಯವಾಗಿ ಶಾಪಿಂಗ್ (Shopping) ಎಂದರೆ ಮಹಿಳೆಯರಿಗೆ ಪ್ರಿಯವಾದದ್ದು. ಆದರೆ ಪ್ರವಾಸದ ವೇಳೆ ಅದರಲ್ಲೂ ಏಕಾಂಗಿಯಾಗಿ ಪ್ರವಾಸ (tour) ಮಾಡುವಾಗ ಅನಗತ್ಯ ಖರ್ಚುಗಳಿಗೆ (Unnecessary expenditure) ಕಡಿವಾಣ ಹಾಕುವುದು ಒಳ್ಳೆಯದು.

ಏಕವ್ಯಕ್ತಿ ಪ್ರಯಾಣವು ಮನಸ್ಸಿಗೆ ಹೆಚ್ಚು ಖುಷಿ ಕೊಡುವಂತದ್ದು. ಭಾರತೀಯ ಮಹಿಳೆಯರಲ್ಲಿ ಶೇ. 30ರಷ್ಟು ಮಂದಿ ಏಕಾಂಗಿಯಾಗಿ ಪ್ರವಾಸ ಹೊರಡಲು ಇಷ್ಟ ಪಡುತ್ತಾರೆ. ಅಂತಾರಾಷ್ಟ್ರೀಯ ಮತ್ತು ದೇಶಿಯ ಪ್ರವಾಸಗಳನ್ನು ಮಾಡುತ್ತಾರೆ. ಪ್ರಯಾಣ ಸುಗಮವಾಗಿರಬೇಕಾದರೆ ಅಥವಾ ಒತ್ತಡದಿಂದ ಮುಕ್ತವಾಗಿರಬೇಕಾದರೆ ಹಣ ನಿರ್ವಹಣೆ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ಇದಕ್ಕಾಗಿ ಕೆಲವು ಸಲಹೆ ಇಲ್ಲಿವೆ.

ಸರಿಯಾದ ಯೋಜನೆ

ಪ್ರವಾಸ ಹೊರಡುವಾಗ ಬಜೆಟ್ ಕುರಿತು ಸರಿಯಾದ ಯೋಜನೆ ರೂಪಿಸಿ. ದೈನಂದಿನ ವೆಚ್ಚಗಳನ್ನು ಅಂದಾಜು ಮಾಡಿ. ವಸತಿ, ಆಹಾರ, ಸಾರಿಗೆ, ವಿವಿಧ ಚಟುವಟಿಕೆಗಳು, ಖರೀದಿಗಾಗಿ ನಿರ್ಧಿಷ್ಟ ಬಜೆಟ್ ಮೀಸಲಿಡಿ. ಮತ್ತು ಇದನ್ನು ಚಾಚೂ ತಪ್ಪದೆ ಪಾಲಿಸಿ.

ಬೇಕಾದಷ್ಟು ಮಾತ್ರ ನಗದು ಇರಲಿ

ಪ್ರಯಾಣ ಮಾಡುವಾಗ ಬೇಕಾದಷ್ಟು ಮಾತ್ರ ಹಣ ನಗದು ರೂಪದಲ್ಲಿ ಇರಲಿ. ಅದನ್ನು ವಿವಿಧ ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿ.

Tips for Solo Travelers

ಗುಪ್ತ ಹಣ!

ಪ್ರಯಾಣದ ವೇಳೆ ಹಣವನ್ನು ಸುರಕ್ಷಿತವಾಗಿರಿಸಲು ಬ್ಯಾಗ್, ಬಟ್ಟೆಯಲ್ಲಿರುವ ಗುಪ್ತ ಸ್ಥಳಗಳನ್ನು ಬಳಸಿ. ಇದರಿಂದ ಪಿಕ್ ಪಾಕೆಟ್ ಆದರೆ ಹೆಚ್ಚಿನ ಹಣ ನಿಮ್ಮ ಬಳಿ ಜೋಪಾನವಾಗಿರುತ್ತದೆ. ಅಪಾಯದ ಸಂದರ್ಭದಲ್ಲಿ ನಿಮ್ಮ ಸುರಕ್ಷತೆ ಮೊದಲು ಎನ್ನುವುದು ನೆನಪಿರಲಿ.

ಹಣಕಾಸಿನ ಸುರಕ್ಷತಾ ಜಾಲ

ತುರ್ತು ನಿಧಿಯನ್ನು ನಿಮ್ಮ ಆತ್ಮೀಯ ಸ್ನೇಹಿತರ ಬಳಿ ಇಟ್ಟಿರಿ. ತುರ್ತು ಸಂದರ್ಭದಲ್ಲಿ ಅದು ನಿಮಗೆ ಸುಲಭವಾಗಿ ಸಿಗುವಂತಿರಬೇಕು. ವಿದೇಶ ಪ್ರವಾಸದ ವೇಳೆ ಅಲ್ಲಿರುವ ಸ್ನೇಹಿತರ ಬಳಿ ಹಣ ಕೊಟ್ಟಿರಿ ಅಥವಾ ಅವರಿಂದ ಹಣ ಪಡೆಯಿರಿ. ಇದರಿಂದ ದುಬಾರಿ ಎಟಿಎಂ ಶುಲ್ಕ ಮತ್ತು ವಿನಿಮಯ ದರಗಳನ್ನು ಉಳಿತಾಯ ಮಾಡಬಹುದು.

ಬ್ಯಾಂಕ್ ಕಾರ್ಡ್ ಬಳಕೆ ಬಗ್ಗೆ ಎಚ್ಚರ

ಕಾರ್ಡ್ ಸ್ವೈಪ್ ಮಾಡುವ ಮೊದಲು ಬ್ಯಾಂಕ್ ಕಾರ್ಡ್ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಿ. ವಿದೇಶಿ ವಹಿವಾಟು ಶುಲ್ಕ ಮತ್ತು ನೇರ ವಿನಿಮಯ ದರಗಳ ಬಗ್ಗೆ ತಿಳಿದುಕೊಳ್ಳಿ.

ವಂಚನೆ ಬಗ್ಗೆ ಜಾಗರೂಕರಾಗಿರಿ

ವಂಚನೆ ಎಲ್ಲಿ, ಯಾವಾಗ ಬೇಕಾದರೂ ನಿಮ್ಮ ಮೇಲೆ ದಾಳಿ ನಡೆಸಬಹುದು. ಈ ಬಗ್ಗೆ ಜಾಗರೂಕರಾಗಿರುವುದು ಮುಖ್ಯ. ಹೊಸ ನಗರಕ್ಕೆ ಕಾಲಿಡುವ ಮೊದಲು ಯಾವ ರೀತಿಯಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

Tips for Solo Travelers

ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿ

ನಗರದಲ್ಲಿ ಸುತ್ತಾಡುವಾಗ ಸಾರ್ವಜನಿಕ ಸಾರಿಗೆಯು ಬಜೆಟ್ ಸ್ನೇಹಿಯಾಗಿರುತ್ತದೆ. ಟ್ಯಾಕ್ಸಿಗಳನ್ನು ಬಿಟ್ಟು ಸ್ಥಳೀಯ ಬಸ್ಸು, ಮೆಟ್ರೋ ಅಥವಾ ರೈಲುಗಳ ಬಗ್ಗೆ ತಿಳಿದುಕೊಳ್ಳಿ. ಅನೇಕ ನಗರಗಳು ದಿನದ ಪಾಸ್‌ ಅಥವಾ ಪ್ರಯಾಣ ಕಾರ್ಡ್‌ಗಳನ್ನು ನೀಡುತ್ತವೆ. ಅದು ಸಾಕಷ್ಟು ಹಣ ಉಳಿತಾಯಕ್ಕೆ ದಾರಿ ಮಾಡಿಕೊಡುತ್ತದೆ.

ಸೀಸನ್ ಪ್ರವಾಸ

ಕೆಲವೊಂದು ನಿರ್ದಿಷ್ಟ ಸೀಸನ್ ಗಳು ಪ್ರವಾಸಕ್ಕೆ ಉತ್ತೇಜನ ನೀಡುತ್ತದೆ.. ಈ ಸಂದರ್ಭದಲ್ಲಿ ವಿಮಾನ, ವಸತಿ ಮೇಲೆ ಆಕರ್ಷಕ ರಿಯಾಯಿತಿಗಳು ಲಭ್ಯವಾಗುತ್ತದೆ. ಈ ವಿಧಾನವು ಬಜೆಟ್ ಸ್ನೇಹಿಯಾಗಿರುತ್ತದೆ.

No Honking City: ಈ ನಗರದಲ್ಲಿ ಕೇಳುವುದೇ ಇಲ್ಲ ಹಾರ್ನ್ ಶಬ್ದ!

ಬಜೆಟ್‌ ಮೇಲೆ ನಿಗಾ ಇರಲಿ

ಸ್ಥಳೀಯ ಸಿಮ್ ಕಾರ್ಡ್ ಬಳಸಿ. ಈ ಮೂಲಕ ಸ್ಥಳೀಯ ದರಗಳಲ್ಲಿ ಡೇಟಾ ಮತ್ತು ಕರೆಗಳ ಪ್ರಯೋಜನವನ್ನು ಪಡೆಯಬಹುದು. ಅನೇಕ ವಿಮಾನ ನಿಲ್ದಾಣಗಳು ಮತ್ತು ಸಿಟಿ ಹಬ್‌ಗಳು ಸಿಮ್ ಕಾರ್ಡ್‌ಗಳನ್ನು ಒದಗಿಸುತ್ತವೆ ಅಥವಾ ಆನ್ಲೈನ್ ಮೂಲಕವೂ ಇದನ್ನು ಪಡೆಯಬಹುದು. ಬಜೆಟ್ ಮೇಲೆ ಗಮನವಿರಿಸಿ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.