ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೂ ಮುನ್ನವೇ 750 ಬೈಕ್ ಸವಾರರು ನವದೆಹಲಿ ಯಲ್ಲಿ ಶನಿವಾರ ಹರ್ ಘರ್ ತಿರಂಗಾ ಅಭಿಯಾನದಡಿ ತಿರಂಗಾ ಯಾತ್ರೆ ನಡೆಸಿದರು.
ಬಿಜೆಪಿ ಸಂಸದ ಎಸ್.ಮಂಜಿಂದರ್ ಸಿಂಗ್ ಸಿರ್ಸಾ ನೇತೃತ್ವದಲ್ಲಿ ಸವಾರರು ಕೇಸರಿ ಪೇಟ ಧರಿಸಿ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಿಂದ ರ್ಯಾಲಿಯನ್ನು ಪ್ರಾರಂಭಿಸಿದರು. ರ್ಯಾಲಿಯು ಇಂಡಿಯಾ ಗೇಟ್ ನ ಪಟಿಯಾಲ ಹೌಸ್ ನಲ್ಲಿ ಕೊನೆ ಗೊಂಡಿತು. ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರು ತಿರಂಗಾ ಬೈಕ್ ರ್ಯಾಲಿಗೆ ಹಸಿರು ನಿಶಾನೆ ತೋರಿದರು.
ಕೇಂದ್ರ ಸಚಿವ ಜನರಲ್ (ನಿವೃತ್ತ) ವಿ.ಕೆ.ಸಿಂಗ್ ಅವರು ದೆಹಲಿಯಲ್ಲಿ ಫಿಟ್ ಇಂಡಿಯಾ ಅಭಿಯಾನ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಲಕ್ನೋಗೆ ಓಟಕ್ಕೆ ಹಸಿರು ನಿಶಾನೆ ತೋರಿದರು.
‘ಆಜಾದಿ ಕಾ ಅಮೃತ್ ಮಹೋತ್ಸವ್ ಅಡಿಯಲ್ಲಿ, ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಪ್ರತಿದಿನ 75 ಕಿ.ಮೀ ಓಡಲು ನಿರ್ಧರಿಸಿ ದರು. ಮುಂದಿನ 10 ದಿನಗಳಲ್ಲಿ 750 ಕಿ.ಮೀ ಕ್ರಮಿಸಿ ಲಕ್ನೋ ತಲುಪಲು ನಿರ್ಧರಿಸಿದರು’ ಎಂದು ಹೇಳಿದರು.
ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ಭಾರತದ ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ಆ.10 ರಂದು ತಿರಂಗಾ ರ್ಯಾಲಿ ಆಯೋಜಿಸುವುದಾಗಿ ದೆಹಲಿ ವಿಶ್ವವಿದ್ಯಾಲಯ ತಿಳಿಸಿದೆ.
ರ್ಯಾಲಿಯು ನಾಲ್ಕು ಕಿಲೋಮೀಟರ್ ದೂರವನ್ನು ಕ್ರಮಿಸಲಿದ್ದು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.