Monday, 16th September 2024

Bengal Wants Its Own Daughter ಸ್ಲೋಗನ್ ಬಿಡುಗಡೆ ಮಾಡಿದ ಟಿಎಂಸಿ

ಕೋಲ್ಕತ್ತಾ: ‘Bengal Wants Its Own Daughter’ ಎಂಬ ಸ್ಲೋಗನ್ ಅನ್ನು ರಾಜ್ಯದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆ‌ಸ್‌ ಪಕ್ಷ ಅನಾವರಣಗೊಳಿಸಿದೆ.

ತೀವ್ರ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಆಡಳಿತಾರೂಢ ಟಿಎಂಸಿ ಹಾಗೂ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ತೀವ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.

ಬಂಗಾಳಕ್ಕೆ ಹೊರಗಿನವರ ಅವಶ್ಯಕತೆ ಇಲ್ಲ. ಹೊರಗಿನವರು ಇಲ್ಲಿ ಅಶಾಂತಿ ಸೃಷ್ಟಿಸಲು ಬಿಡುವುದಿಲ್ಲ ಎಂದು ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಾರ್ಥ್ ಚಟರ್ಜಿ ಹೇಳಿದ್ದಾರೆ. ಈ ಸ್ಲೋಗನ್ ಇರುವ ಬ್ಯಾನರ್ ಹೋರ್ಡಿಂಗ್ಸ್​ಗಳು ಕಲ್ಕತ್ತದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ.

ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಹವಣಿಸುತ್ತಿರುವ ಬಿಜೆಪಿ, ತನ್ನ ಸಿಎಂ ಅಭ್ಯರ್ಥಿಯಲ್ಲಿ ಗೊಂದಲ ಮೂಡಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೊರಗಿನವರು ಸಿಎಂ ಆಗುತ್ತಾರೆ ಎಂದು ಊಹಾಪೋಹ ಎದ್ದಿದೆ. ಈ ಹಿನ್ನೆಲೆಯಲ್ಲಿ ಈ ಸಾರಿ ಚುನಾವಣೆಯ ಸ್ಲೋಗನ್ ಬಿಡುಗಡೆ ಮಾಡಿರುವ ಟಿಎಂಸಿ, ಬಿಜೆಪಿಗೆ ಎದಿರೇಟು ನೀಡಿದೆ.

 

Leave a Reply

Your email address will not be published. Required fields are marked *