ಹೈದರಾಬಾದ್: ಅಲ್ಲು ಅರ್ಜುನ್ ನಟನೆ ಪುಷ್ಪಾ 2ಸಿನಿಮಾ ರಿಲೀಸ್ ಆದಾಗಿನಿಂದಲೂ ತೆಲುಗು ಚಿತ್ರರಂಗದಲ್ಲಿ (Tollywood) ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇವೆ. ಸರ್ಕಾರ ಮತ್ತು ತೆಲುಗು ಚಿತ್ರರಂಗ ನಡುವೆ ಒಂದು ರೀತಿ]ಯ ಬಿರುಕು ಮೂಡಿದಂತೆ ಭಾಸವಾಗುತ್ತಿದೆ. ಈ ನಿಟ್ಟಿನಲ್ಲಿ ಇಡೀ ತೆಲಂಗಾಣ (Telangana CM) ಚಿತ್ರರಂಗ ಇಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ (Revanth Reddy) ಅವರನ್ನು ಭೇಟಿ ಮಾಡಲಿದೆ ಎಂದು ಚಿತ್ರ ನಿರ್ಮಾಪಕ ದಿಲ್ ರಾಜು (Dil Raju) ತಿಳಿಸಿದ್ದಾರೆ. ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ರಾಜು ಅವರು ಚಲನಚಿತ್ರೋದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ.
#Tollywood #FilmIndustry Representatives to meet #Telangana CM #RevanthReddy in #Hyderabad.
— Surya Reddy (@jsuryareddy) December 25, 2024
Film producer and Telangana Film Development Corporation (#TFDC) chairman #DilRaju said, "The film industry will meet him CM (Revanth Reddy), asks appointment for tomorrow… I will act… pic.twitter.com/3IqX576cMe
ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಪುಷ್ಪ 2 (Pushpa 2) ಚಿತ್ರದ ಪ್ರದರ್ಶನದ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾದ ಬಗ್ಗೆ ನಿನ್ನೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮುಖ್ಯಮಂತ್ರಿ ಅವರು ಗುರುವಾರ ಅಪಾಯಿಂಟ್‌ಮೆಂಟ್ ಅನ್ನು ನಿಗದಿಪಡಿಸಿದ್ದಾರೆ ಮತ್ತು ಇಡೀ ಚಿತ್ರರಂಗ ಅವರನ್ನು ಭೇಟಿ ಮಾಡಲಿದೆ. ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ, ಹೈದರಾಬಾದ್‌ನಲ್ಲಿ ಲಭ್ಯವಿರುವ ಚಿತ್ರರಂಗದ ಎಲ್ಲರೂ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಕಾಲ್ತುಳಿತದ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಶ್ರೀ ತೇಜ್ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಎರಡು ದಿನಗಳ ಹಿಂದೆ ವೆಂಟಿಲೇಟರ್ ಅನ್ನು ತೆಗೆದುಹಾಕಲಾಗಿದೆ ಎಂದು ದಿಲ್ ರಾಜು ಮಾಹಿತಿ ನೀಡಿದ್ದಾರೆ. ಈ ಹಿಂದೆ ಶ್ರೀ ತೇಜ್ ಅವರ ಕುಟುಂಬವನ್ನು ಭೇಟಿ ಮಾಡಲು ಅವರು ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶ್ರೀ ತೇಜ್ ಅವರ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಚರ್ಚಿಸಲು ತಾನು ಈ ಹಿಂದೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿದ್ದೆ, ಚಿತ್ರರಂಗ ಮತ್ತು ಸರ್ಕಾರ ಎರಡೂ ಅಗತ್ಯ ನೆರವು ನೀಡುತ್ತವೆ ಎಂದು ಹೇಳಿದ್ದರು.
ಪುಷ್ಪಾ 2 ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ (Hyderabad stampede) ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪುತ್ರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತೆಲಗು ನಟ ಅಲ್ಲು ಅರ್ಜುನ್ (Allu Arjun) ವರನ್ನು ಬಂಧಿಸಿದ್ದರು. ನಂತರ ಪೊಲೀಸರು ಸಮನ್ಸ್ ನೀಡಿದ್ದು, ಮಂಗಳವಾರ ನಟ ವಿಚಾರಣೆಗೆ ಹಾಜರಾಗಿದ್ದರು.
ಈ ಸುದ್ದಿಯನ್ನೂ ಓದಿ : Allu Arjun: ಅಲ್ಲು ಅರ್ಜುನ್‌ಗೆ 14 ದಿನ ನ್ಯಾಯಾಂಗ ಬಂಧನ