ಬೇಸಿಗೆಯ (summer) ಸೆಕೆ ಇಲ್ಲ. ಮಳೆ (rain) ಸುರಿದು ಈಗಾಗಲೇ ಭೂಮಿ ತಂಪಾಗಿದೆ. ಹಿತವಾದ ವಾತಾವರಣ ಎಲ್ಲೆಡೆ ಸೃಷ್ಟಿಯಾಗಿದೆ. ಚಳಿಗಾಲಕ್ಕೂ ಮುನ್ನ ಸಣ್ಣದೊಂದು ಪ್ರವಾಸ (Tour) ಮಾಡಬೇಕು ಎನ್ನುವ ಯೋಚನೆ ಇದ್ದರೆ ಅದಕ್ಕೆ ಅಕ್ಟೋಬರ್ ತಿಂಗಳು ಅತ್ಯುತ್ತಮ. ಮಾನ್ಸೂನ್ ಗೆ ವಿದಾಯ ಹೇಳುವ ಹೊತ್ತಲ್ಲಿ ದೇಶದ ಕೆಲವೊಂದು ತಾಣಗಳು ಸುತ್ತಾಡಲು ಸೂಕ್ತವಾಗಿದೆ.
ಈಗಾಗಲೇ ಶಾಲಾ ಮಕ್ಕಳಿಗೆ ರಜೆ ಸಿಕ್ಕಿದೆ. ಮಕ್ಕಳ ಶಾಲಾ ಪರೀಕ್ಷೆ ಚಿಂತೆಯು ಇಲ್ಲ. ಕಚೇರಿಯಿಂದ ಕೊಂಚ ಬ್ರೇಕ್ ಪಡೆದು ಪ್ರವಾಸದ ಯೋಜನೆಯನ್ನು ಹಾಕಿಕೊಳ್ಳಬಹುದು. ಚಳಿಗಾಲಕ್ಕೂ ಮೊದಲು ರಜೆಯನ್ನು ಆನಂದಿಸಬೇಕು ಎಂದು ಬಯಸುವವರು ದೇಶದ ಈ ಏಳು ತಾಣಗಳಿಗೆ ಪ್ರವಾಸದ ಯೋಜನೆ ಹಾಕಿಕೊಳ್ಳಬಹುದು.
ವಾಗಮೋನ್
ಕೇರಳದ ವಾಗಮೋನ್ ಹಚ್ಚ ಹಸುರಿನಿಂದ ಕೂಡಿದ ಸುಂದರ ತಾಣ. ತಿರುವಾಂಕೂರಿನ ಮಧ್ಯೆ ಇರುವ ಈ ಪುಟ್ಟ ಊರು ಚಹಾ ತೋಟಗಳಿಂದ ಸಮೃದ್ಧವಾಗಿದೆ. ಎತ್ತ ಕಣ್ಣು ಹಾಯಿಸಿದರತ್ತ ಪ್ರಕೃತಿಯ ಸೊಬಗನ್ನು ಕಾಣಬಹುದು. ವಾಗಮೋನ್ ಪ್ರವಾಸ ಖಂಡಿತಾ ದೀರ್ಘಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.
ಜಮ್ಮು ಮತ್ತು ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರದ ಸೌಂದರ್ಯದ ಬಗ್ಗೆ ನಾವು ಸಾಕಷ್ಟು ಕೇಳಿರುತ್ತೇವೆ. ಭಾರತದಲ್ಲಿ ಭೇಟಿ ನೀಡಲು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದಿದೆ. ಹಿಮಾಲಯದ ಅತಿ ಎತ್ತರದ ಮರುಭೂಮಿ ನಗರವಾದ ಲೇಹ್‌ನಿಂದ ಪಿರ್ ಪಂಜಾಲ್ ಶ್ರೇಣಿಯಿಂದ ಹರಿಯುವ ರೋಮಾಂಚಕ ಝೀಲಂ ನದಿಯವರೆಗೆ ಹರಡಿರುವ ಇದು ಭೂಮಿಯ ಮೇಲಿನ ಸ್ವರ್ಗದಂತೆ ಭಾಸವಾಗುತ್ತದೆ. ಅಕ್ಟೋಬರ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.
ರಿಷಿಕೇಶ
ಉತ್ತರಾಖಂಡದ ಋಷಿಕೇಶವು ಗಂಗಾನದಿಯ ದಡದಲ್ಲಿರುವ ಒಂದು ಪವಿತ್ರ ನಗರ. ವಿಶ್ವದ ಯೋಗ ರಾಜಧಾನಿ ಎಂಬ ಬಿರುದು ಪಡೆದಿರುವ ಇಲ್ಲಿ ಭೇಟಿ ನೀಡಬಹುದಾದ ಅನೇಕ ಧಾರ್ಮಿಕ ಸ್ಥಳಗಳಿವೆ. ಇಲ್ಲಿ ಹಲವಾರು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಋಷಿಕೇಶಕ್ಕೆ ಒಂದು ಸಣ್ಣ ಪ್ರವಾಸ ಮನಸ್ಸನ್ನು ಉಲ್ಲಾಸಗೊಳಿಸುವುದು. ಅಕ್ಟೋಬರ್‌ನಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ.
ಬಿರ್ ಬಿಲ್ಲಿಂಗ್
ಸಾಹಸ ಪ್ರಿಯರಿಗೆ ಹಿಮಾಚಲ ಪ್ರದೇಶದಲ್ಲಿರುವ ಬಿರ್ ಬಿಲ್ಲಿಂಗ್ ಒಂದು ಅತ್ಯುತ್ತಮ ಆಯ್ಕೆ. ಇದು ಪ್ಯಾರಾಗ್ಲೈಡಿಂಗ್ ಪ್ರಿಯರಿಗೆ ಸ್ವರ್ಗ ಎಂದರೆ ತಪ್ಪಾಗಲಾರದು. ಇಲ್ಲಿ ಟ್ರಕ್ಕಿಂಗ್ ಅನ್ನು ಆನಂದಿಸಬಹುದು. ಹಳ್ಳಿಗಳಲ್ಲಿ ಅಲೆದಾಡಬಹುದು. ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವನ್ನು ಸವಿಯಬಹುದು.
ಬಾಂಧವಗಢ ರಾಷ್ಟ್ರೀಯ ಉದ್ಯಾನ
ಮಧ್ಯಪ್ರದೇಶದಲ್ಲಿರುವ ಈ ಉದ್ಯಾನ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನ. ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿರುವ ಇಲ್ಲಿ ಬಂಗಾಳ ಹುಲಿಗಳನ್ನು ಕಾಣಬಹುದು. ಬಾಂಧವ್‌ಗಢ ಅಕ್ಟೋಬರ್‌ನಲ್ಲಿ ಭೇಟಿ ನೀಡಲು ಭಾರತದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಬೆರಗುಗೊಳಿಸುವ ಸಸ್ಯ ಮತ್ತು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು.
ಹಂಪಿ
ಕರ್ನಾಟಕದಲ್ಲಿ ಪ್ರಾಚೀನ ವಿಜಯನಗರ ಸಾಮ್ರಾಜ್ಯದ ಅವಶೇಷಗಳ ಮಧ್ಯೆ ಇರುವ ಹಂಪಿಯು ಗತಕಾಲದ ಶ್ರೀಮಂತಿಕೆಯನ್ನು ಇಂದಿಗೂ ತೋರಿಸುತ್ತಿದೆ. ಯಾತ್ರಿಕರ ಸ್ವರ್ಗದಂತಿರುವ ಇದು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
Unique Tradition: ಇಲ್ಲಿನ ರಾಜನಿಗೆ ಪ್ರತಿ ವರ್ಷವೂ ಮದುವೆ; ನಗ್ನ ನೃತ್ಯದಲ್ಲಿ ಗೆಲ್ಲುವಾಕೆ ಆತನ ಹೊಸ ಪತ್ನಿ!
ಗೋಕರ್ಣ
ಕರ್ನಾಟಕ ಮತ್ತೊಂದು ಸುಂದರ ತಾಣ ಗೋಕರ್ಣ. ಇಲ್ಲಿನ ಸೌಂದರ್ಯವನ್ನು ಅನುಭವಿಸಲು ಸೂಕ್ತ ಸಮಯವೆಂದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿ. ಪ್ರಶಾಂತ ಕಡಲತೀರಗಳಿಗೆ ಹೆಸರುವಾಸಿಯಾಗಿರುವ ಗೋಕರ್ಣವು ಶಾಂತಿಯುತವಾದ ಏಕಾಂತವನ್ನು ಬಯಸುವ ಪ್ರಯಾಣಿಕರ ಅಚ್ಚುಮೆಚ್ಚಿನ ತಾಣವಾಗಿದೆ.