ಫೆಬ್ರವರಿ 16ರಂದು ನಡೆದ ಚುನಾವಣೆಯಲ್ಲಿ ಬಿಜೆಪಿಯು ಗೆಲುವು ಸಾಧಿಸಿತ್ತು. ಸಿಎಂ ಮಾಣಿಕ್ ಸಾಹಾ ಅವರ ಜತೆಗೆ 8 ಶಾಸಕರು ಸಚಿವರಾಗಿಯೂ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಉಪಸ್ಥಿತ ರಿದ್ದರು.
ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಜತೆಗೆ ಅರುಣಾಚಲ ಪ್ರದೇಶ ಸಿಎ ಪ್ರೇಮ ಖಂಡು, ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಮತ್ತು ಸಿಕ್ಕಿಮ್ ಸಿಎಂ ಪಿ ಎಸ್ ತಮಂಗ್ ಅವರು ಈ ವೇಳೆ ಹಾಜರಿದ್ದರು. ತ್ರಿಪುರಾ ಮಾಜಿ ಸಿಎಂ ಬಿಪ್ಲಬ್ ದೇಬ್ ಅವರೂ ಈ ವೇಳೆ ಕಾಣಿಸಿಕೊಂಡರು.
ಕೇವಲ ಒಂದು ಸ್ಥಾನ ಗೆದ್ದ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಐಪಿಎಫ್‌ಟಿಗೂ ಒಂದು ಸಚಿವ ಸ್ಥಾನ ನೀಡಲಾಗಿದೆ. ಶುಕ್ಲ ಚರಣ್ ನೋಟಿಯಾ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ, ಮೂರು ಸಚಿವ ಸ್ಥಾನಗಳನ್ನು ಖಾಲಿ ಇಡಲಾಗಿದೆ. 13 ಸ್ಥಾನಗಳನ್ನು ಗೆದ್ದಿರುವ ತಿಪ್ರಾ ಮೋಥಾ ಕೂಡ ಸರ್ಕಾರ ಪಾಲುದಾರ ವಾಗುವ ಸಾಧ್ಯತೆ ಇರುವುದು 3 ಸಚಿವ ಸ್ಥಾನಗಳನ್ನು ಖಾಲಿ ಇಡಲಾಗಿದೆ ಎಂದು ಹೇಳಲಾಗುತ್ತಿದೆ.