Sunday, 8th September 2024

ಎರಡು ಟ್ರಕ್’ಗಳ ಮುಖಾಮುಖಿ ಡಿಕ್ಕಿ: ಒಂಬತ್ತು ಮಂದಿ ಸಾವು

ವಡೋದರಾ: ಎರಡು ಟ್ರಕ್’ಗಳು ಗುಜರಾತ್ ನ ವಡೋದರಾದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಘಟನಾ ಸ್ಥಳದಲ್ಲೇ ಮೃತಪ್ಟಿದ್ದು, 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ.

ವಡೋದರಾದ ವಾಘೋಡಿಯಾ ಕ್ರಾಸ್ ರಸ್ತೆ ಬಳಿಯ ಇರುವ ಸೇತುವೆ ಬಳಿ ಬೆಳಗಿನ ಜಾವ 3 ದುರ್ಘಟನೆ ಸಂಭವಿಸಿದೆ.

ಸುದ್ದಿ ತಿಳಿಯುತ್ತಿದ್ದಂತೆಯ್ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಮೃತಪಟ್ಟರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ ಎದುರಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!