Monday, 11th November 2024

ಮೇಲ್ಛಾವಣಿ ಕುಸಿದು ಕನಿಷ್ಠ ಇಬ್ಬರ ಸಾವು

ಗುರುಗ್ರಾಂ: ಸೆಕ್ಟರ್ 109ರ ಕಾಂಡೋಮಿನಿಯಂನಲ್ಲಿ ಆರನೇ ಮಹಡಿಯ ಫ್ಲಾಟ್’ನ ಮೇಲ್ಛಾವಣಿ ಕುಸಿದು ಕನಿಷ್ಠ ಇಬ್ಬರು ಮೃತಪಟ್ಟು, ಇತರ ಆರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದರು.

ಗುರ್ ಗಾಂವ್ ನ ಸೆಕ್ಟರ್ 109ರ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದಲ್ಲಿ ಗುರುವಾರ ಸಂಜೆ 6 ಗಂಟೆಯ ಸಂದರ್ಭದಲ್ಲಿ, 18 ಮಹಡಿಗಳ ಮನೆಯಲ್ಲಿನ 6ನೇ ಮಹಡಿಯ ಅಪಾರ್ಮೆಂಟ್ ಒಂದರ ಮೇಲ್ಛಾವಣಿ ಕುಸಿತಗೊಂಡು, ಇಬ್ಬರು ಮೃತಪಟ್ಟು ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿದರು.

18 ಮಹಡಿಗಳ ಚಿಂಟೆಲ್ಸ್ ಪ್ಯಾರಾಡಿಸೊ ವಸತಿ ಸಂಕೀರ್ಣದ ಆರನೇ ಮಹಡಿಯ ಅಪಾರ್ಟ್ ಮೆಂಟ್ ನ ಲಿವಿಂಗ್ ರೂಮ್ ಮಹಡಿ ಮೊದಲು ಕೆಳಗಿಳಿದಿದೆ ಎಂದು ಆರಂಭಿಕ ವರದಿಗಳು ತಿಳಿಸಿವೆ. ಸಿಕ್ಕಿಬಿದ್ದ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿ ಕ್ರಿಯೆ ಪಡೆಯ (ಎನ್ ಡಿಆರ್ ಎಫ್) ತಂಡಗಳು ರಕ್ಷಣಾ ಕಾರ್ಯ ನಡೆಸುತ್ತಿವೆ.