Thursday, 12th December 2024

ಬ್ರಿಟನ್’ನಿಂದ ಆಗಮಿಸಿದ ಇಬ್ಬರಿಗೆ ಓಮಿಕ್ರಾನ್ ಪಾಸಿಟಿವ್

Omicron Virus

ಅಹಮದಾಬಾದ್: ಬ್ರಿಟನ್ ನಿಂದ ಇತ್ತೀಚೆಗೆ ಗುಜರಾತ್‌ಗೆ ಆಗಮಿಸಿದ ಎನ್‌ಆರ್‌ಐ ಮತ್ತು ಹದಿಹರೆ ಯದ ಹುಡುಗನಿಗೆ ಕೋವಿಡ್-19 ರೂಪಾಂತರಿ ಓಮಿಕ್ರಾನ್ ಪಾಸಿಟಿವ್ ದೃಢಪಟ್ಟಿದೆ.

ಗುಜರಾತ್’ನಲ್ಲಿ ಕೋವಿಡ್-19 ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಒಂಬತ್ತಕ್ಕೆ ಏರಿಕೆಯಾಗಿದೆ.

ಡಿ.15 ರಂದು ಬ್ರಿಟನ್ ನಿಂದ ಆಗಮಿಸಿದ ಕೂಡಲೇ ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಸಿದ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಎನ್‌ಆರ್‌ಐ, ಕರೋನಾ ವೈರಸ್ ಪಾಸಿಟಿವ್ ಬಂದಿತ್ತು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಓಮಿಕ್ರಾನ್ ದೃಢಪಟ್ಟ ಇಬ್ಬರು ರೋಗಿಗಳು ಪ್ರಸ್ತುತ ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ ಛಾರಿ ತಿಳಿಸಿದ್ದಾರೆ.