Thursday, 12th December 2024

ಯೂಟರ್ನ್‌: 24 ಗಂಟೆಯಲ್ಲಿ ಮಾತೃಪಕ್ಷಕ್ಕೆ ಮರಳಿದ ಟಿಎಂಸಿ ಮುಖಂಡ

ಕೋಲ್ಕತಾ: ತೃಣಮೂಲ ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ ಪಕ್ಷದ ಶಾಸಕರೊಬ್ಬರು 24 ಗಂಟೆಗಳ ಅವಧಿಯಲ್ಲೇ ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಪಾಂಡವೇಶ್ವರ ಕ್ಷೇತ್ರದ ಶಾಸಕ ಜಿತೇಂದ್ರ ತಿವಾರಿ ಅವರು ಪಕ್ಷಕ್ಕೆ ರಾಜಿನಾಮೆ ನೀಡಿದ 24 ಗಂಟೆ ಗಳ ಅವಧಿಯಲ್ಲೇ ಮತ್ತೆ ಪಕ್ಷಕ್ಕೆ ವಾಪಸ್ ಆಗಿದ್ದಾರೆ.

ಟಿಎಂಸಿಯ ಹಿರಿಯ ನಾಯಕ ಅರುಪ್ ಬಿಸ್ವಾಸ್ ಮತ್ತು ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಅವರನ್ನು ದಕ್ಷಿಣ ಕೋಲ್ಕತಾದ ಸುರುಚಿ ಸಂಘ ಕ್ಲಬ್‌ ನಲ್ಲಿ ಭೇಟಿ ಮಾಡಿದ ತಿವಾರಿ ತಮ್ಮ ದುಡುಕಿನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ.

‘ನಾನು ತಪ್ಪು ಮಾಡಿದ್ದೇನೆ. ದೀದಿ ಅವರಿಗೆ ಘಾಸಿಯುಂಟು ಮಾಡುವ ಕೆಲಸವನ್ನು ನಾನು ಮಾಡಲಾರೆ. ನಾನು ಖುದ್ದಾಗಿ ಮಮತಾ ದೀದಿ ಅವರನ್ನು ಭೇಟಿ ಮಾಡಿ ಅವರ ಕ್ಷಮೆ ಕೋರುತ್ತೇನೆ. ನಾನು ತೃಣಮೂಲ ಕಾಂಗ್ರೆಸ್‌ನಲ್ಲಿಯೇ ಕೆಲಸ ಮುಂದು ವರಿಸುತ್ತೇನೆ ಎಂದು ತಿಳಿಸಿದ್ದಾರೆ.