Sunday, 15th December 2024

ಮನೆಮನೆಗೆ ಕೊಳಾಯಿ ನೀರು ಪೂರೈಸಲು 3.6 ಲಕ್ಷ ಕೋಟಿ; ಹೆಚ್ಚುವರಿ 1000 ಜನ ಆರೋಗ್ಯ ಕೇಂದ್ರ ಸ್ಥಾಪನೆ

ನೀರಿನ ಸಂರಕ್ಷಣೆ ಹಾಗೂ ಜಲಭದ್ರತೆ ಕುರಿತಂತೆ ರಾಷ್ಟ್ರ ಮಟ್ಟದಲ್ಲಿ ಆಂದೋಲನಕ್ಕೆ ಕರೆ ನೀಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ, ಈ ಕುರಿತಂತೆ ಈ ಬಾರಿಯ ಬಜೆಟ್‌ನಲ್ಲಿ ದೊಡ್ಡ ಹೆಜ್ಜೆಗಳನ್ನು ಇಟ್ಟಿದೆ.

1. ಸುರಕ್ಷಿತ ಕುಡಿಯುವ ನೀರಿನ ಪೂರೈಕೆಗಾಗಿ ಜಲ ಜೀವನ ಯೋಜನೆ.

2. ಜಲಜೀವನ ಅಭಿಯಾನದ ಮೂಲಕ ದೇಶದ ಎಲ್ಲಾ ಮನೆಗಳಿಗೂ ಪೈಪ್ ಮೂಲಕ ನೀರನ್ನು ಪೂರೈಕೆ ಮಾಡಲು 3.6 ಲಕ್ಷ ಕೋಟಿ ರೂಗಳ ಬೃಹತ್‌ ಯೋಜನೆ.

3. ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ನಗರಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಅಂತರ್ಜಲ ಹೆಚ್ಚಿಸಲು ಮಳೆ ನೀರು ಕೊಯ್ಲಿಗೆ ಉತ್ತೇಜನ ನೀಡಲು 11,500 ಕೋಟಿ ರೂಗಳು.

ಆರೋಗ್ಯ ಹಾಗೂ ನೈರ್ಮಲ್ಯ

1. 1000 ಹೆಚ್ಚುವರಿ ಆಸ್ಪತ್ರೆಗಳಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಅನುಷ್ಠಾನ. ರೋಗ ರುಜೀನಗಳ ಹಬ್ಬುವಿಕೆಗೆ ಅಂತ್ಯ ಹಾಡಲು ದೇಶಾದ್ಯಂತ ಸ್ವಚ್ಛ ಭಾರತ ಮಿಶನ್‌ಅನ್ನು ಬಲಗೊಳಿಸುವ ಉದ್ದೇಶ.

2. ಜನೌಷಧಿ ಕೇಂದ್ರಗಳ ವಿಸ್ತರಣೆ.

3. ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ರೂಗಳು ಮೀಸಲು.

4. ಸ್ವಚ್ಛ ಭಾರತ ಅಭಿಯಾನಕ್ಕೆ 12,300 ಕೋಟಿ ರೂಗಳು.

5. ಬಹಿರ್ದೆಸೆ ಮುಕ್ತ ವಾತಾವರಣ ನಿರ್ಮಾಣ ಮಾಡಲಾಗಿದ್ದು,ಅದನ್ನು ಮುಂದುವರೆಸಲು ಹೊಸ ಯೋಜನೆ.

6. ಕೊಳಚೆ ನೀರಿನ ನಿರ್ವಹಣೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಸ್ಕೀಂಗಳು.