Monday, 25th November 2024

ಲಸಿಕೆ ಪಡೆದ ಆರೋಗ್ಯ ಸಚಿವ ಹರ್ಷವರ್ಧನ್

ನವದೆಹಲಿ : ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಅವರ ಪತ್ನಿ ನುತನ್ ಗೋಯಲ್ ಅವರು ಮಂಗಳವಾರ ದೆಹಲಿ ಹಾರ್ಟ್ ಅಂಡ್ ಲಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕೊರೊನಾ ವೈರಸ್ ಲಸಿಕೆ ತೆಗೆದುಕೊಂಡರು.

60 ವರ್ಷ ಮೇಲ್ಪಟ್ಟವರಿಗೆ ಮತ್ತು 45 ರಿಂದ 59 ವರ್ಷ ವಯಸ್ಸಿನ ಅನಾ ರೋಗ್ಯ ಪೀಡಿತರಿಗೆ ಕೋವಿಡ್-19 ಲಸಿಕೆಯ ಎರಡನೇ ಹಂತದ ಲಸಿಕೆ ಭಾರತ ಆರಂಭಿಸಿದೆ.

ಈಗಾಗಲೇ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ನವೀನ್ ಪಟ್ನಾಯಕ್, ನಿತೀಶ್ ಕುಮಾರ್ ಸೇರಿ ಹಲವು ಹಿರಿಯ ರಾಜಕೀಯ ನಾಯಕರು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.