Sunday, 15th December 2024

ನಿಯಂತ್ರಣ ತಪ್ಪಿ ಮರಕ್ಕೆ ಸಾರಿಗೆ ಬಸ್ ಡಿಕ್ಕಿ

ನವದೆಹಲಿ: ಸಾರಿಗೆ ಬಸ್’ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಆಗ್ರಾದಿಂದ ಬಂದ ಉತ್ತರಪ್ರದೇಶದ ಸಾರಿಗೆ ಬಸ್ ದೆಹಲಿ ಸುಖ್ದೇವ್ ವಿಹಾರ್ ಬಳಿಯಿರುವ ಮರವೊಂದಕ್ಕೆ ಬೆಳಗಿನ ಜಾವ ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.