Thursday, 12th December 2024

ಉತ್ತರ ಪ್ರದೇಶ ಚುನಾವಣೆ: ಮಹಿಳೆಯರಿಗೆ ಶೇ.40 ರಷ್ಟು ’ಕೈ’ ಟಿಕೆಟ್

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇ.40 ರಷ್ಟು ಟಿಕೆಟ್ ನೀಡುವುದಾಗಿ ಘೋಷಿ ಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣೆಯಲ್ಲಿ ಶೇ. 40 ರಷ್ಟು ಟಿಕೆಟ್ ನ್ನು ಮಹಿಳೆಯರಿಗೆ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಈ ಟಿಕೆಟ್ ಗಳನ್ನು ಅರ್ಹತೆ ಆಧಾರದ ಮೇರೆಗೆ ನೀಡಲಾಗುವುದು ಎಂದರು. ಬೇರೆ ಇತರ ರಾಜಕೀಯ ಪ್ರೇರಿತ, ಅಜೆಂಡಾದೊಂದಿಗೆ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಪಪಡಿಸಿದರು.

ಲಖೀಂಪುರ್ ಖೇರಿ ಘಟನೆ ಕುರಿತಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ಹತ್ಯೆ ಮಾಡಿದವರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿರುವುದು ಮತ್ತು ಕೊಲ್ಲಲ್ಪಟ್ಟವರು, ಇಲ್ಲಿ ನ್ಯಾಯಕ್ಕಾಗಿ ಮೊರೆಯಿಡುತ್ತಿರುವುದು ದುರದೃಷ್ಟಕರವಾಗಿದೆ ಎಂದರು.

ಹತ್ರಾಸ್, ಲಖೀಂಪುರ್ ಖೇರಿಯಲ್ಲಿ ಏನು ಸಂಭವಿಸಿತು. ಇಂತಹ ಬಿಜೆಪಿ ಸರ್ಕಾರದಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.