ಲಖನೌ: 17 ವರ್ಷದ ಬಾಲಕನೊಬ್ಬ ತನ್ನ ಪ್ರೇಯಸಿ ಸಲುವಾಗಿ ಆತ್ಮೀಯ ಸ್ನೇಹಿತನನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ ನಡೆದಿದೆ. ಸ್ನೇಹಿತ ತನ್ನ ಪ್ರೇಯಸಿಯ ಅಶ್ಲೀಲ ವೀಡಿಯೊಗಳನ್ನು ಕದ್ದು ಅವಳನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಆರೋಪಿ ಹೇಳಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. (UP Horror)
ಆರೋಪಿಗಳು ಮತ್ತು ಕೊಲೆಯಾದ ಬಾಲಕ , ಇಬ್ಬರೂ ಅಪ್ರಾಪ್ತರಾಗಿದ್ದರು. ಆರೋಪಿ, ಕೊಲೆಯಾದ ಬಾಲಕ ಮತ್ತು ಸಂತ್ರಸ್ತ ಯುವತಿ ಒಂದೇ ಶಾಲೆಯಲ್ಲಿ 11ನೇ ತರಗತಿಯಲ್ಲಿ ಓದುತ್ತಿದ್ದರು. ಕೊಲೆಯಾದ ಬಾಲಕನನ್ನು ಅಭಿನವ್ ಎಂದು ಗುರುತಿಸಲಾಗಿದೆ. ಅಭಿನವ್ ಮತ್ತು ಆರೋಪಿ ಬಾಲಕ ಇಬ್ಬರೂ ನೆರೆಹೊರೆಯವರಾಗಿದ್ದರು ಎಂದು ತಿಳಿದು ಬಂದಿದೆ.
ಇಬ್ಬರೂ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ತಮ್ಮ ಮನೆಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಕೋಚಿಂಗ್ ಸೆಂಟರ್‌ಗೆ ಒಟ್ಟಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಶನಿವಾರ ಇಬ್ಬರೂ ಕೋಚಿಂಗ್ ಕ್ಲಾಸ್‌ಗೆ ತೆರಳಿದ್ದರು, ಆದರೆ ಸಂಜೆಯಾದರೂ ಅಭಿನವ್ ಹಿಂತಿರುಗಿರಲಿಲ್ಲ. ಆತನ ಪೋಷಕರು ಆರೋಪಿಯನ್ನು ಕೇಳಿದಾಗ ಅಭಿನವ್ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದು ಹೇಳಿದ್ದಾನೆ. ನಂತರ ಅಭಿನವ್ ತಂದೆ ಸುನೀಲ್ ಕುಮಾರ್ ಆ ದಿನ ರಾತ್ರಿ ನಾಪತ್ತೆ ದೂರು ದಾಖಲಿಸಿದ್ದಾರೆ ಹಾಗೂ ಸ್ನೇಹಿತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಅದರಲ್ಲಿ ಇಬ್ಬರು ಸ್ನೇಹಿತರು ಒಟ್ಟಿಗೆ ಸ್ಕೂಟರ್‌ನಲ್ಲಿ ತೆರಳಿರುವುದು ಕಂಡು ಬಂದಿದೆ. ನಂತರ ಆರೋಪಿಯನ್ನು ವಿಚಾರಣೆ ಮಾಡಿದಾಗ, ಆತ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ವಿಚಾರಣೆಯಲ್ಲಿ ತನ್ನ ಫೋನ್‌ನಲ್ಲಿ ನನ್ನ ಗೆಳತಿಯ ಖಾಸಗಿ ವಿಡಿಯೋವನ್ನು ಅಭಿನವ್ ಕದ್ದು ತನ್ನ ಮೊಬೈಲ್‌ಗೆ ವರ್ಗಾವಣೆ ಮಾಡಿದ್ದು, ನಂತರ, ಹುಡುಗಿಯನ್ನು ಭೇಟಿಯಾಗುವಂತೆ ಬ್ಲಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದ. ಒಂದು ವೇಳೆ ಅವನು ಹೇಳಿದ್ದನ್ನು ಅವಳು ಪಾಲಿಸದಿದ್ದರೆ, ಫೋಟೋಗಳನ್ನು ಇಂಟರ್ನೆಟ್‌ಗೆ ಹಾಕುವುದಾಗಿ ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾನೆ.
ಪ್ರೇಯಸಿ ಇದನ್ನು ನನ್ನ ಬಳಿ ಹೇಳಿಕೊಂಡಿದ್ದಳು. ಅಭಿನವ್ ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪಿ ಆತನ ಜೊತೆ ಹೊಟೆಲ್ ಒಂದಕ್ಕೆ ತೆರಳಿ ಊಟ ಮಾಡಿದ್ದ. ನಂತರ ಏಕಾಏಕಿ ತನ್ನ ಬ್ಯಾಗ್‌ನಿಂದ ಸುತ್ತಿಗೆ ತೆಗೆದು ಅಭಿನವ್ ತಲೆಗೆ ಹೊಡೆದಿದ್ದಾನೆ. ನಿರಂತವಾಗಿ ಹಲ್ಲೆ ಮಾಡಿದ ಪರಿಣಾಮ ಅಭಿನವ್ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.
ಪೊಲೀಸರು ಭಾನುವಾರ ಅಭಿನವ್‌ನ ಶವವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಆದರೆ ಅವರ ಸಂಬಂಧಿಕರು ನ್ಯಾಯ ಸಿಗುವವರೆಗೂ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದರು. ಆತ ಒಬ್ಬನೇ ಅಭಿನವ್ ಕೊಲೆ ಮಾಡಲು ಸಾಧ್ಯ ಇಲ್ಲ. ಇದರ ಹಿಂದೆ ಬೇರೆಯದೇ ಸತ್ಯ ಇದೆ. ಇತರ ಆರೋಪಿಗಳನ್ನು ಪೊಲೀಸರು ಬಂಧಿಸಬೇಕೆಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Murder Case: ವಿಮೆ ಹಣದ ಆಸೆಗೆ ತಂದೆಯನ್ನೇ ಕೊಂದ ಕಿರಿ ಮಗ; ಮನನೊಂದು ಹಿರಿಯ ಮಗ ಆತ್ಮಹತ್ಯೆ!