Sunday, 15th December 2024

ಉತ್ತರ ಪ್ರದೇಶ ಸಚಿವ ವಿಜಯ್ ಕಾಶ್ಯಪ್ ಕೋವಿಡ್ ಸೋಂಕಿಗೆ ಬಲಿ

ಲಕ್ನೋ: ಉತ್ತರ ಪ್ರದೇಶದ ಕಂದಾಯ ಮತ್ತು ಪ್ರವಾಹ ನಿಯಂತ್ರಣ ಖಾತೆ ಸಚಿವರಾಗಿದ್ದ ವಿಜಯ್ ಕಾಶ್ಯಪ್ ಕೋವಿಡ್ ಸೋಂಕಿನಿಂದ ಗುರ್ಗಾಂವ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಿಜಯ್ ಕಾಶ್ಯಪ್ (56) ಅವರು ಮುಜಾಫರ್ ನಗರದ ಚಾರ್ತಾವಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ಗುರ್ಗಾಂವ್ ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೋವಿಡ್ 2ನೇ ಅಲೆಯಲ್ಲಿ ಸೋಂಕಿನಿಂದ ಮೃತರಾದ ಉತ್ತರಪ್ರದೇಶದ ಐದನೇ ಬಿಜೆಪಿ ಶಾಸಕರು ಇವರಾಗಿದ್ದಾರೆ.

ವಿಜಯ್ ಕಾಶ್ಯಪ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿ, ಸಚಿವ ವಿಜಯ್ ಕಾಶ್ಯಪ್ ಅವರು ತಮ್ಮ ಜೀವನ ವನ್ನು ಸಾರ್ವಜನಿಕರ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಪ್ರಧಾನಿ ಟ್ವೀಟ್ ಮಾಡಿದ್ದರು.