ಡೆಹ್ರಾಡೂನ್: ರಣಭೀಕರ ಮಳೆಗೆ ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ನೀರಿನ ರಭಸಕ್ಕೆ ಬೃಹತ್ ಕಟ್ಟಡಗಳು ನಾಮಾವಶೇಷವಾಗಿವೆ. ಹಲವರು ಕಣ್ಮರೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಪ್ರವಾಹದ ಅಬ್ಬರಕ್ಕೆ ನದಿಗಳು ಉಕ್ಕಿ ಹರಿಯುತ್ತಿವೆ. ಡೆಹ್ರಾಡೂನ್ ನ ಮಾಲ್ ದೆವ್ತಾ ಪ್ರದೇಶದಲ್ಲಿ ಭೀಕರ ಪ್ರವಾಹಕ್ಕೆ ಡಿಫೆನ್ಸ್ ಕಾಲೇಜು ಕಟ್ಟಡ ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದ್ದು, ಪ್ರವಾಹದ ರಭಸಕ್ಕೆ ಕೊಚ್ಚಿ ಹೋಗಿದೆ.
ಮಾಲ್ ದೆವ್ತಾ ಪ್ರದೇಶದಲ್ಲಿ ಪ್ರಹಾದಕ್ಕೆ ನೀರು ಮನೆಗಳಿಗೆ ನುಗ್ಗಿದ್ದು, ರೆಸಾರ್ಟ್ ಗಳು, ಬೃಹತ್ ಕಟ್ಟಡಗಳು ಮುಳುಗಡೆಯಾಗಿವೆ. ಉತ್ತರಾಖಂಡದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.