Monday, 25th November 2024

ಪತ್ನಿಗೆ ಕೋಪ ಬಂದಿದೆ, ಸಮಾಧಾನಪಡಿಸಬೇಕು, ರಜೆ ಕೊಡಿ: ಕಾನ್ಸ್​ಟೇಬಲ್​ ಪತ್ರ

ಖನೌ: ಉತ್ತರ ಪ್ರದೇಶದ ಪೊಲೀಸ್​ ಕಾನ್ಸ್​ಟೇಬಲ್​ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನನ್ನ ಪತ್ನಿಗೆ ತುಂಬಾ ಕೋಪ ಬಂದಿದೆ ಮತ್ತು ನನ್ನ ಫೋನ್​ ಕರೆ ಸ್ವೀಕರಿಸುತ್ತಿಲ್ಲ. ಹೀಗಾಗಿ ರಜೆ ಬೇಕಿದೆ ಎಂದು ಕಾನ್ಸ್​ಟೇಬಲ್​ ಪತ್ರ ಬರೆದಿ ದ್ದಾರೆ.

ಹೊಸದಾಗಿ ಮದುವೆಯಾದವರು ಕೂಡ ಕೆಲವೊಮ್ಮೆ ಆದಷ್ಟು ಬೇಗನೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಇದೇ ಸಮಸ್ಯೆ ಯಿಂದ ತೊಂದರೆಗೀಡಾದ ಉತ್ತರ ಪ್ರದೇಶದ ಪೊಲೀಸ್ ಪೇದೆ ರಜೆ ಕೋರಿ ಅರ್ಜಿ ಬರೆದಿದ್ದಾರೆ.

ನನಗೆ ರಜೆ ಸಿಗದ ಕಾರಣ ಪತ್ನಿ ಸಿಟ್ಟಿಗೆದ್ದು ಫೋನ್ ಡಿಸ್​ಕನೆಕ್ಟ್​ ಮಾಡುತ್ತಿದ್ದಾಳೆ ಎಂದು ಹಿರಿಯ ಅಧಿಕಾರಿಗೆ ಪತ್ರ ಬರೆದು ಕಾನ್ಸ್​ಟೇಬಲ್​ ತನ್ನ ಸಮಸ್ಯೆಗಳನ್ನು ವಿವರಿಸಿದ್ದಾರೆ.

ಪೇದೆಯನ್ನು ನೇಪಾಳ ಗಡಿಯಲ್ಲಿರುವ ಮಹಾರಾಜಗಂಜ್​ ಜಿಲ್ಲೆಗೆ ಪೋಸ್ಟಿಂಗ್​ ಹಾಕಲಾ ಗಿದೆ. ಜನವರಿ 10 ರಿಂದ ಒಂದು ವಾರಗಳ ಕಾಲ ರಜೆ ಕೊಡಿ ಎಂದು ಪೇದೆ ಹಿರಿಯ ಅಧಿಕಾರಿ ಗಳ ಬಳಿ ಮನವಿ ಮಾಡಿದ್ದಾರೆ. ನಾನು ಕೇವಲ ಒಂದು ತಿಂಗಳ ಹಿಂದಷ್ಟೇ ಮದುವೆಯಾದೆ. ಅಂದಿನಿಂದ ನಿರಂತರವಾಗಿ ಕೆಲಸಕ್ಕೆ ಹಾಜರಾಗುತ್ತಲೇ ಇದ್ದೇನೆ.

ನನಗೆ ರಜೆ ಸಿಗದ ಕಾರಣ ನನ್ನ ಪತ್ನಿ ತುಂಬಾ ಕೋಪಗೊಂಡಿದ್ದಾಳೆ. ಆಕೆಯನ್ನು ಸಮಾಧಾನ ಮಾಡಬೇಕಿದೆ. ಹೀಗಾಗಿ ರಜೆ ಕೊಡಿ ಎಂದು ಮನವಿ ಮಾಡಿದ್ದಾರೆ.

Read E-Paper click here