Thursday, 12th December 2024

ಉತ್ತರ ಪ್ರದೇಶ ಪಠ್ಯಪುಸ್ತಕದಲ್ಲಿ ಪರಿಷ್ಕರಣೆ: ಹೆಗ್ಡೇವಾರ್, ವೀರ್ ಸಾರ್ವಕರ್ ಇನ್

ಖನೌ: ಕರ್ನಾಟದ ಶಾಲಾ ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂ ಸಂಘದ ಸಂಸ್ಥಾಪಕ ಹೆಗ್ಡೇವಾರ್, ಬಲಪಂಥೀಯ ಚಿಂತಕ ವೀರ್ ಸಾರ್ವಕರ್ ಸೇರಿದಂತೆ ಮತ್ತಿತರ ಪಠ್ಯಗಳನ್ನು ಸೇರ್ಪಡೆ ಮಾಡಿದ್ದು ನಂತರ ಕಾಂಗ್ರೆಸ್ ಸರ್ಕಾರ ಇದನ್ನು ಪರಿಷ್ಕರಣೆ ಮಾಡಿದ್ದು ಇತಿಹಾಸ.

ಇದೀಗ ಸರ್ಕಾರ ತನ್ನ ಪಠ್ಯಕ್ರಮದಲ್ಲಿ ವಿನಾಯಕ ದಾಮೋದರ್ ಸಾವರ್ಕರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸೇರಿದಂತೆ 50 ಮಹಾನ್ ವ್ಯಕ್ತಿಗಳ ಜೀವನಚರಿತ್ರೆಯನ್ನು ಸೇರಿಸಿದೆ.

ಜುಲೈ ತಿಂಗಳಿನಿಂದ ಯು.ಪಿ. ಶಿಕ್ಷಣ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಭಾರತದ 50 ಮಹಾಪುರುಷರ ಜೀವನ ಮತ್ತು ಅವರ ಜೀವನ ಚರಿತ್ರ್ಯೆ ಕುರಿತಾಗಿ ಕಲಿಸಲು ಮುಂದಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ವಿಷಯವು ಕಡ್ಡಾಯವಾಗಿದೆ ಮತ್ತು ಅದರಲ್ಲಿ ಉತ್ತೀರ್ಣರಾಗುವುದು ಅವಶ್ಯಕ ಎಂದು ಮಂಡಳಿಯ ಅಧಿಕಾರಿ ತಿಳಿಸಿದ್ದಾರೆ.

ನೆಹರೂ ಅವರನ್ನು ಹೊರಗಿಡುವ ನಿರ್ಧಾರವನ್ನು ಸಮರ್ಥಿಸಿಕೊಂಡ ಮಾಧ್ಯಮಿಕ ಶಿಕ್ಷಣ ಸಚಿವ ಗುಲಾಬ್ ದೇವಿ, ನೆಹರೂ ನೆ ದೇಶ್ ಕೆ ಲಿಯೇ ಅಪ್ನೆ ಪ್ರಾಣೋ ಕಿ ಆಹುತಿ ನಹಿ ದಿ ಥಿ (ನೆಹರೂ ಅವರು ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿಲ್ಲ). ಆದ್ದರಿಂದ, 50 ಮಹಾಪುರುಷರ ಜೀವನ ಚರಿತ್ರೆಗಳ ಪಟ್ಟಿಯಿಂದ ನೆಹರೂ ಅವರನ್ನು ಹೊರಗಿಡಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿಯೂ 2022 ರ ವಿಧಾನಸಭಾ ಚುನಾವಣೆಗೆ ಬಿಡುಗಡೆಯಾದ ತನ್ನ ಲೋಕ ಕಲ್ಯಾಣ ಸಂಕಲ್ಪ ಪತ್ರದಲ್ಲಿ ಮಹಾಪುರುಷರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಕಥೆಗಳನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಸೇರಿಸುವುದಾಗಿ ಭರವಸೆ ನೀಡಿತ್ತು.

ಈ ವಿಷಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಗೂ ಅದರಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಆದರೆ, ಪ್ರೌಢಶಾಲೆ ಮತ್ತು ಮಧ್ಯಂತರ ಪರೀಕ್ಷೆಗಳ ಅಂಕಪಟ್ಟಿಯಲ್ಲಿ ಅಂಕಗಳನ್ನು ಸೇರಿಸಲಾಗುವುದಿಲ್ಲ ಎಂದು ಯುಪಿ ಬೋರ್ಡ್ ಕಾರ್ಯದರ್ಶಿ ಶುಕ್ಲಾ ಹೇಳಿದ್ದಾರೆ.

10ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಮಂಗಲ್ ಪಾಂಡೆ, ರೋಷನ್ ಸಿಂಗ್, ಸುಖದೇವ್, ಲೋಕಮಾನ್ಯ ತಿಲಕ್, ಗೋಪಾಲ ಕೃಷ್ಣ ಗೋಖಲೆ, ಮಹಾತ್ಮ ಗಾಂ, ಖುದಿ ರಾಮ್ ಬೋಸ್ ಮತ್ತು ಸ್ವಾಮಿ ವಿವೇಕಾನಂದರ ಬಗ್ಗೆ ಕಲಿಯುತ್ತಾರೆ.