Sunday, 8th September 2024

ಡಿ.23 ರಿಂದ ವೈಕುಂಠ ದ್ವಾರ ದರ್ಶನ ಆರಂಭ

ತಿರುಪತಿ: ತಿರುಪತಿಯಲ್ಲಿ ಭಕ್ತರ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಿದ್ದು ಟಿಟಿಡಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಈ ತಿಂಗಳಲ್ಲೇ ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನ ಆರಂಭವಾಗಲಿದೆ.

ಡಿ.23 ರಿಂದ ಜನವರಿ 1 ರವರೆಗೆ ವೈಕುಂಠ ದ್ವಾರ ದರ್ಶನ ಆರಂಭವಾಗಲಿದ್ದು ಒಟ್ಟು 10 ದಿನಗಳ ಕಾಲ ಭಕ್ತರು ವೈಕುಂಠ ದ್ವಾರ ದರ್ಶನ ಮಾಡ ಬಹುದು.

ಈ ಕ್ರಮದಲ್ಲಿ ನೀವು ಸಹ ವೈಕುಂಠ ದ್ವಾರ ದರ್ಶನದ ಸಮಯದಲ್ಲಿ ತಿರುಮಲಕ್ಕೆ ಹೋಗಲು ಯೋಜಿಸುತ್ತಿದ್ದರೆ, ನೀವು ಈ ವಿಷಯಗಳನ್ನು ತಿಳಿದಿರ ಬೇಕು. ಭಕ್ತರ ಅನುಕೂಲಕ್ಕಾಗಿ ಡಿ.22 ರಿಂದ ತಿರುಪತಿ ಮತ್ತು ತಿರುಮಲದ 10 ಕೇಂದ್ರಗಳಲ್ಲಿ 4.25 ಲಕ್ಷ ಟೋಕನ್ ನೀಡಲಾಗುವುದು. ದಿನಕ್ಕೆ 42,500 ರಂತೆ ಒಟ್ಟು 4.25 ಲಕ್ಷ ಟೋಕನ್‌ಗಳನ್ನು ಹತ್ತು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ನಿಮ್ಮ ತಿರುಮಲ ಭೇಟಿಯ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇದೆಯೇ? ಇಲ್ಲದಿದ್ದರೆ, ಅದು ಎಷ್ಟು ತೀವ್ರವಾಗಿರುತ್ತದೆ? ಮುಂತಾದ ವಿಷಯ ಗಳನ್ನೂ ಸಹ ಪರಿಶೀಲಿಸಬೇಕು. ಇಲ್ಲವಾದಲ್ಲಿ ಕುಟುಂಬ ಸಮೇತ ಹೋಗುವಾಗ ಈ ರೀತಿ ಮಳೆ ಬಂದರೆ ಸಮಸ್ಯೆಗಳು ಎದುರಾಗಬಹುದು.

ಸದ್ಯ ಮಿಚುವಾಂಗ್ ಚಂಡಮಾರುತದ ಪರಿಣಾಮದಿಂದಾಗಿ ತಿರುಪತಿ ಸೇರಿದಂತೆ ನಾನಾ ಪ್ರದೇಶಗಳು ಚೇತರಿಸಿಕೊಂಡಿವೆ. ತಿರುಪತಿಗೆ ಭೇಟಿ ನೀಡಲು ಇದು ಸೂಕ್ತ ಸಮಯ. ಯಾಕೆಂದರೆ ಮಿಚುವಾಂಗ್ ಚಂಡಮಾರುತದ ಚೇತರಿಕೆಯ ಲಕ್ಷಣಗಳು ಅಲ್ಲಿ ಗೋಚರಿಸುತ್ತಿವೆ. ಹೀಗಾಗಿ ಜನರು ತಮ್ಮ ಮನೆಗಳಿಂದ ಹೊರಬರಲು ಪ್ರಾರಂಭಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!