Friday, 1st December 2023

ದೇವರ ವಿಗ್ರಹ ಧ್ವಂಸ: ತೌಫೀಕ್ ಅಹ್ಮದ್ ಬಂಧನ

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿರುವ ಹಿಂದೂ ದೇವಾಲಯದಲ್ಲಿ ದೇವರ ವಿಗ್ರಹ ಧ್ವಂಸ ಮಾಡಿದ ಆರೋಪದ ಮೇಲೆ ತೌಫೀಕ್ ಅಹ್ಮದ್ ಎಂಬಾ ತನನ್ನು ಬಂಧಿಸಲಾಗಿದೆ.

ಅಹ್ಮದ್ ಹಣೆಗೆ ತಿಲಕ ಧರಿಸಿ ದೇವಾಲಯದ ಆವರಣ ಪ್ರವೇಶಿಸಿ ‘ಜೈ ಶ್ರೀ ರಾಮ್’ ಎಂದು ಕೂಗುತ್ತಾ ದೇವರ ವಿಗ್ರಹವನ್ನು ಧ್ವಂಸ ಗೊಳಿಸಿದ್ದಾನೆ.

ಲಕ್ನೋದ ಗೋಮತಿ ದಂಡೆಯಲ್ಲಿರುವ ಲೇಟೆ ಹನುಮಾನ್ ಮಂದಿರದಲ್ಲಿ ಘಟನೆ ನಡೆದಿದೆ. ತೌಫೀಕ್ ಅಹ್ಮದ್ ದೇವಾಲಯಕ್ಕೆ ಪ್ರವೇಶಿಸಿ ಜೈ ಶ್ರೀರಾಮ್ ಎಂದು ಕೂಗಲು ಪ್ರಾರಂಭಿಸಿ ವಿಗ್ರಹಗಳ ಮೇಲೆ ಕಲ್ಲು ಎಸೆದು ಧ್ವಂಸಗೊಳಿಸಿದ್ದಾನೆ.

ಅಲ್ಲದೇ, ದೇವಾಲಯದ ಧ್ವಜವನ್ನು ಸಹ ಹರಿದು ಹಾಕಿದ್ದಾನೆ. ಘಟನೆ ಕುರಿತು ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೇವಸ್ಥಾನ ದಲ್ಲಿದ್ದ ಎರಡು ವಿಗ್ರಹಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಆರೋಪಿಯನ್ನು ಬಂಧಿಸಲಾಗಿದ್ದು, ಆತ ಕುಡಿದ ಮತ್ತಿನಲ್ಲಿ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!