Monday, 7th October 2024

Vastu Tips: ಸಂಪತ್ತು, ಸಂತೋಷವನ್ನೂ ತರಬಲ್ಲದು ಗೋಡೆ ಗಡಿಯಾರ!

Vastu Tips

ಗೋಡೆ ಗಡಿಯಾರ (wall clock) ಕೇವಲ ಗಂಟೆಯನ್ನು ಹೇಳುವುದಿಲ್ಲ ಮನೆಯ ವಾಸ್ತುವನ್ನೂ (Vastu Tips) ನಿರ್ಧರಿಸುತ್ತದೆ. ನಿತ್ಯದ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗದೇ ಇದ್ದರೆ ಗೋಡೆ ಗಡಿಯಾರ ಏನು ಹೇಳುತ್ತದೆ ಎಂಬುದನ್ನು ಕಿವಿ ಕೊಟ್ಟು ಕೇಳುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.

ವಾಸ್ತು ಶಾಸ್ತ್ರವು ನಾವು ವಾಸಿಸುವ ಜಾಗದಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಹೇಳುತ್ತದೆ. ಮನೆ, ಕಚೇರಿ, ಸ್ವಂತ ಅಂಗಡಿಗಳಲ್ಲಿ ಗೋಡೆಯ ಗಡಿಯಾರದ ಸರಿಯಾದ ಸ್ಥಾನ ಮತ್ತು ವೈಶಿಷ್ಟ್ಯಗಳು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಇದು ಆರೋಗ್ಯ, ಸಂಪತ್ತು ಮತ್ತು ಸಂತೋಷದಂತಹ ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರಬಹುದು.

ಸೂಕ್ತ ಸ್ಥಳ ಯಾವುದು?

ಗೋಡೆ ಗಡಿಯಾರವನ್ನು ಇಡಲು ಸೂಕ್ತ ಸ್ಥಾನಮಾನವಿದೆ. ಸರಿಯಾದ ದಿಕ್ಕಿನಲ್ಲಿ ಗೋಡೆ ಗಡಿಯಾರವನ್ನು ಇರಿಸದೇ ಇದ್ದರೆ ಅನೇಕ ರೀತಿಯ ತೊಂದರೆಗಳು ಎದುರಾಗಬಹುದು. ಗೋಡೆ ಗಡಿಯಾರವನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ಎನ್ನುವ ಕುರಿತು ವಾಸ್ತು ಏನು ಹೇಳುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ಉತ್ತರ ದಿಕ್ಕು

ಈ ದಿಕ್ಕನ್ನು ಸಂಪತ್ತಿನ ದೇವರಾದ ಕುಬೇರನು ಆಳುತ್ತಾನೆ. ಇಲ್ಲಿ ಇರಿಸಲಾಗಿರುವ ಗೋಡೆಯ ಗಡಿಯಾರವು ಸಮೃದ್ಧಿ ಮತ್ತು ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದು ವಾಸಿಸುವ ಕೊಠಡಿಗಳು ಮತ್ತು ವ್ಯಾಪಾರ ಸ್ಥಳಗಳಿಗೆ ಸೂಕ್ತವಾಗಿದೆ.

Vastu Tips

ಯಾವ ದಿಕ್ಕಿನಲ್ಲಿ ಇಡಬಾರದು?

ದಕ್ಷಿಣ ದಿಕ್ಕು ಸಾವಿನ ದೇವನಾದ ಯಮನಿಗೆ ಸಂಬಂಧಿಸಿದೆ. ಗಡಿಯಾರವನ್ನು ಇಲ್ಲಿ ಇರಿಸುವುದರಿಂದ ಅಡೆತಡೆಗಳು ಮತ್ತು ಸವಾಲುಗಳಿಗೆ ಕಾರಣವಾಗಬಹುದು. ನಾವು ಇಡುವ ಗೋಡೆ ಗಡಿಯಾರವು ಉತ್ತರ ಅಥವಾ ಪೂರ್ವಕ್ಕೆ ಎದುರಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನೈಋತ್ಯ ದಿಕ್ಕಿನಲ್ಲಿ ಗಡಿಯಾರವನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಗೆ ಅಡ್ಡಿಯಾಗಬಹುದು. ಇದು ನಕಾರಾತ್ಮಕತೆಯನ್ನು ಹೆಚ್ಚಿಸಬಹುದು. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದನ್ನು ತಪ್ಪಿಸುವುದು ಉತ್ತಮ.

ಗಾತ್ರ ಮತ್ತು ಆಕಾರ ಯಾವ ರೀತಿ ಇರಬೇಕು?

ಗೋಡೆ ಗಡಿಯಾರದ ಗರಿಷ್ಠ ಪ್ರಯೋಜನ ಸಿಗಲು 6ರಿಂದ 18 ಇಂಚುಗಳ ನಡುವಿನ ವ್ಯಾಸದ ಗೋಡೆಯ ಗಡಿಯಾರವನ್ನು ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ವಾಸ್ತು ತಜ್ಞರು.

ಅಲ್ಲದೇ ಗೋಡೆ ಗಡಿಯಾರವು ದುಂಡಗಿನ ಆಕಾರದಲ್ಲಿರಬೇಕು. ಇದು ಸಂಪತ್ತನ್ನು ಆಕರ್ಷಿಸುವುದರಿಂದ ಅತ್ಯಂತ ಮಂಗಳಕರವಾಗಿವೆ.

Vastu Tips

ಮಲಗುವ ಕೋಣೆಯಲ್ಲಿ ಇಡಬಹುದೇ?

ಮಲಗುವ ಕೋಣೆಯಲ್ಲಿ ನಿಂತ ಗಡಿಯಾರವನ್ನು ಎಂದಿಗೂ ಇರಿಸಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುತ್ತದೆ. ಯಾವುದೇ ಗಡಿಯಾರ ನಿಂತಿದ್ದರೆ ತಕ್ಷಣವೇ ಸರಿಪಡಿಸಿ.

ಯಾವಾಗಲೂ ಸರಿಯಾದ ಸಮಯವನ್ನು ತೋರಿಸಲು ಗಡಿಯಾರವನ್ನು ಹೊಂದಿಸಿ. ಕೆಲವು ನಿಮಿಷಗಳ ಮುಂದೆ ಇಡಬಹುದು. ಆದರೆ ಗಡಿಯಾರ ಹಿಂದಕ್ಕೆ ಚಲಿಸುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

Vastu Tips: ವಾಸ್ತು ನಿಯಮ ಪಾಲಿಸಿ, ಮನೆಯಲ್ಲಿ ಸಂಪತ್ತನ್ನು ವೃದ್ಧಿಸಿ!

ಧನಾತ್ಮಕ ಶಕ್ತಿಯ ಹರಿವನ್ನು ಕಾಪಾಡಿಕೊಳ್ಳಲು ಗೋಡೆಯ ಗಡಿಯಾರ ಮತ್ತು ಅದರ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ವಾರದಲ್ಲೊಮ್ಮೆಯಾದರು ಗಡಿಯಾರದ ಸುತ್ತಮುತ್ತ ಕಣ್ಣು ಹಾಯಿಸು ಸ್ವಚ್ಛಗೊಳಿಸುವುದು ಒಳ್ಳೆಯದು.