Sunday, 29th December 2024

Veer Bal Diwas: ಸಿಖ್‌ ವೀರರಿಗೆ ಅವಮಾನ… ಕೇರಳ ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ

Veer Bal Diwas

ತಿರುವನಂತಪುರಂ: ಕೇರಳದ ಶಾಲೆಯೊಂದರಲ್ಲಿ ಸಿಖ್‌ ವೀರರಿಗೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇರಳದ (Kerala) ಕಣ್ಣೂರು ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ‘ವೀರ್ ಬಾಲ್ ದಿವಸ್’ (Veer Bal Diwas) ಕಾರ್ಯಕ್ರಮದಲ್ಲಿ ಕಿರಿಯ “ಸಾಹಿಬ್ಜಾದಾಸ್” (sahibzadas) ಅವರನ್ನು ಅನುಕರಣೆ ಮಾಡಿರುವುದಕ್ಕೆ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯ (SGPC) ಅಧ್ಯಕ್ಷ ಹರ್ಜಿಂದರ್ ಸಿಂಗ್ ಧಾಮಿ (Harjinder Singh Dhami) ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 26 ರಂದು ಸಿಖ್‌ರ ಗುರುಗಳಾದ ಗುರು ಗೋವಿಂದ್‌ ಸಿಂಗ್‌ ಅವರ ಪುತ್ರರಾದ ಸಾಹಿಬ್ಜಾದಾಸ್ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಹುತಾತ್ಮತೆಯ ಅಂಗವಾಗಿ ವೀರ್ ಬಾಲ್ ದಿವಸ್ ಎಂದು ಆಚರಿಸಲಾಗುತ್ತದೆ. ಈ ಬಗ್ಗೆ ಮಾತನಾಡಿದ ಹರ್ಜಿಂದರ್ ಸಿಂಗ್ ಧಾಮಿ ಸಾಹಿಬ್ಜಾದಾಸ್ ಅವರ ಹುತಾತ್ಮ ದಿನದಂದು ಅವರನ್ನು ಅನುಕರಿಸುವುದು ಅವರಿಗೆ ತೋರಿಸು ಅಗೌರವ ಮತ್ತು ಸಿಖ್ ತತ್ವಗಳ ಉಲ್ಲಂಘನೆ ಎಂದು ಹೇಳಿದ್ದಾರೆ.

ಕೇರಳದ ಪಯ್ಯನೂರು ಕೇಂದ್ರೀಯ ವಿದ್ಯಾಲಯದ ಆಡಳಿತವು ಮಕ್ಕಳನ್ನು ಕಿರಿಯ ಸಾಹಿಬ್‌ಜಾದಾಸ್‌ರನ್ನು ಅನುಕರಿಸಿದ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಸ್‌ಜಿಪಿಸಿ ಇದರ ಬಗ್ಗೆ ಆಕ್ಷೇಪಿಸಿದ ನಂತರ ಶಾಲೆಯು ವಿವಾದಾತ್ಮಕ ಫೋಟೋಗಳನ್ನು ತೆಗೆದುಹಾಕಿತ್ತು. ಆದರೂ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಧಾಮಿ ಒತ್ತಾಯಿಸಿದ್ದಾರೆ. ಕಣ್ಣೂರಿನ ಪಯ್ಯನೂರು ಪಟ್ಟಣದ ಕೇಂದ್ರೀಯ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹುತಾತ್ಮರಾದ ಯುವ ಸಿಖ್ಖರ ವೇಷ ಧರಿಸಿದ್ದ ಘಟನೆ ನಡೆದಿತ್ತು.

ಧಾಮಿ ಅವರು ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು CBSE ಗೆ ಸಾಹಿಬ್‌ಜಾದಾಸ್‌ರ ಹುತಾತ್ಮ ದಿನವನ್ನು ಆಚರಿಸುವಾಗ ಶಾಲೆಗಳು ಮತ್ತು ಸಂಸ್ಥೆಗಳು ಸಿಖ್ ತತ್ವಗಳು ಮತ್ತು ಇತಿಹಾಸವನ್ನು ಅನುಸರಿಸುವಾಗ ಖಚಿತಪಡಿಸಿಕೊಳ್ಳಲು ಕರೆ ನೀಡಿದ್ದಾರೆ.

ಮೊಘಲರ ಆಳ್ವಿಕೆಯಲ್ಲಿ ಪಂಜಾಬಿನಲ್ಲಿ ಸಿಖ್ಖರ ನಾಯಕರಾಗಿದ್ದ ಗುರು ಗೋಬಿಂದ್ ಸಿಂಗ್ ಅವರು 1699 ರಲ್ಲಿ ಖಾಲ್ಸಾ ಪಂಥವನ್ನು ಸ್ಥಾಪಿಸಿದರು. ಸಿಖ್ ಸಮುದಾಯದ ಜನರನ್ನು ಧಾರ್ಮಿಕ ಕಿರುಕುಳದಿಂದ ರಕ್ಷಿಸುವ ಉದ್ದೇಶವನ್ನು ಈ ಪಂಥವು ಹೊಂದಿತ್ತು. ಗುರು ಗೋಬಿಂದ್ ಸಿಖ್ ಅವರಿಗೆ ನಾಲ್ಕು ಗಂಡು ಮಕ್ಕಳಾದ ಅಜಿತ್, ಜುಝಾರ್, ಜೋರಾವರ್ ಮತ್ತು ಫತೇಹ್, ಅವರೆಲ್ಲರೂ ಖಾಲ್ಸಾದ ಭಾಗವಾಗಿದ್ದರು. ಅವರನ್ನು ಚಾರ್ ಸಾಹಿಬ್ಜಾದೆ ಖಾಲ್ಸಾ ಎಂದು ಕರೆಯಲಾಗುತ್ತಿತ್ತು.

ಆದರೆ,ಸಣ್ಣ ವಯಸ್ಸಿನಲ್ಲಿಯೇ ಆ ನಾಲ್ವರು ಮಕ್ಕಳ ಮೊಘಲ್ ಸೇನೆಯಿಂದ ಬಲಿಯಾದರು. ಹೀಗಾಗಿ 2022 ರ ಜನವರಿ 9 ರಂದು, ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನದಂದು, ಡಿಸೆಂಬರ್ 26 ರಂದು ಸಿಖ್ ಗುರುಗಳ ಮಕ್ಕಳಾದ ಜೋರಾವರ್ ಸಿಂಗ್ ಮತ್ತು ಫತೇಹ್ ಸಿಂಗ್ ಅವರ ಹುತಾತ್ಮ ದಿನದ ಗೌರವಾರ್ಥವಾಗಿ ‘ವೀರ್ ಬಾಲ್ ದಿವಸ್ ಅನ್ನು ಆಚರಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ : Sukhbir Singh Badal: ಹತ್ಯೆ ಪ್ರಯತ್ನದ ಮರುದಿನವೇ ಗೋಲ್ಡನ್ ಟೆಂಪಲ್‌ನಲ್ಲಿ ‘ಪ್ರಾಯಶ್ಚಿತ’ ಮುಂದುವರಿಸಿದ ಸುಖಬೀರ್