Friday, 20th September 2024

31ರಂದು ಮೇಲ್ಮನೆ ಸದಸ್ಯರ ಸಭೆ: ವೆಂಕಯ್ಯ ನಾಯ್ಡು

ನವದೆಹಲಿ:  ಪ್ರಸಕ್ತ ಸಾಲಿನ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ರಾಜ್ಯಸಭಾಧ್ಯಕ್ಷ ಎಂ ವೆಂಕಯ್ಯ ನಾಯ್ಡು ಮೇಲ್ಮನೆ ಸದಸ್ಯರ ಸಭೆ ಕರೆದಿದ್ದಾರೆ.

ಜ.31ರಂದು ವೆಂಕಯ್ಯ ನಾಯ್ಡು ಅವರು ತಮ್ಮ ನಿವಾಸದಲ್ಲಿ ಸದಸ್ಯರ ಸಭೆ ಕರೆದು ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಪೂರ್ವ ಭಾವಿ ತಯಾರಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನ ಈ ವರ್ಷ ಜನವರಿ 29 ರಿಂದ ಪ್ರಾರಂಭವಾಗಿ ಏಪ್ರಿಲ್ 8 ರವರೆಗೆ 2 ಭಾಗಗಳಲ್ಲಿ ಚರ್ಚೆ ನಡೆಯುತ್ತದೆ. ಕೋವಿಡ್ ಬಿಕ್ಕಟ್ಟಿನ ಅವಧಿಯಲ್ಲಿ ಸಾಗುವ ದೇಶದ ಸ್ಥಿತಿ ಮತ್ತು ನಿರ್ದೇಶನ ಎರಡನ್ನೂ ಈ ಬಜೆಟ್ ನಿರ್ಧರಿಸುತ್ತದೆ.

ಮೊದಲ ಹಂತದ ಬಜೆಟ್ ಅಧಿವೇಶನವು ಜನವರಿ 29 ರಿಂದ ಫೆಬ್ರವರಿ 15 ರವರೆಗೆ ನಡೆಯುತ್ತದೆ ಮತ್ತು ಎರಡನೇ ಭಾಗವು ಮಾರ್ಚ್ 8 ರಿಂದ ಏಪ್ರಿಲ್ 8 ರವರೆಗೆ ನಡೆಯುತ್ತದೆ. ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನ್ನು ಮಂಡಿಸಲಿದ್ದಾರೆ.