Sunday, 15th December 2024

ದೂರು ನೀಡಲು ಬಂದ ಸಂತ್ರಸ್ತೆಯ ಮೇಲೆ ಅತ್ಯಾಚಾರ..!

ಲಕ್ನೋ: ಉತ್ತರ ಪ್ರದೇಶದ ಲಲಿತ್‌ಪುರದಲ್ಲಿ ದೂರು ದಾಖಲಿಸಲು ಠಾಣೆಗೆ ಬಂದಿದ್ದ ಅತ್ಯಾಚಾರ ಸಂತ್ರಸ್ತೆಯ ಮೇಲೆ ಪೊಲೀಸ್ ಅಧಿಕಾರಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ.

ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ಯುವತಿ ಆರೋಪಿಸಿದ್ದು, ಬಳಿಕ ಸಂಬಂಧಿಯೊಂದಿಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು. ಆರೋಪಿ ಠಾಣಾಧಿಕಾರಿ ತಿಲಕಧಾರಿ ಸರೋಜ್ ನನ್ನು ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

ಅಧಿಕಾರಿ ಪರಾರಿಯಾಗಿದ್ದು, ಮೂರು ಪೊಲೀಸ್ ತಂಡಗಳು ಆತನಿಗಾಗಿ ಶೋಧ ನಡೆಸಿವೆ ಎಂದು ಲಲಿತ್‌ಪುರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಯು ಆಕೆಯನ್ನು ತನ್ನ ಗ್ರಾಮಕ್ಕೆ ಮರಳಿ ಕರೆತಂದು ಪರಾರಿಯಾಗುವ ಮೊದಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕರೆತಂದಿದ್ದಾನೆ.

ಆರೋಪಿ ಪೊಲೀಸ್ ಠಾಣೆಯ ಅಧಿಕಾರಿ ಬಾಲಕಿಯನ್ನು ಆಕೆಯ ಚಿಕ್ಕಮ್ಮನಿಗೆ ಹಸ್ತಾಂತರಿಸಿದ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಅಪ್ರಾಪ್ತೆಯ ಹೇಳಿಕೆ ದಾಖಲಿಸಲು ಮರುದಿನ ಪೊಲೀಸ್ ಠಾಣೆಗೆ ಕರೆಸಲಾಯಿತು. ಮರುದಿನ ಆರೋಪಿ ಅಧಿಕಾರಿಯು ಬಾಲಕಿಯ ಚಿಕ್ಕಮ್ಮನ ಸಮ್ಮುಖದಲ್ಲಿ ಪೊಲೀಸ್ ಠಾಣೆಯ ಕೊಠಡಿಯೊಳಗೆ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಎಫ್ ಐ ಆರ್ ನಲ್ಲಿ ತಿಳಿಸಲಾಗಿದೆ. ಎಫ್‌ಐಆರ್‌ ನಲ್ಲಿ ಬಾಲಕಿಯ ಚಿಕ್ಕಮ್ಮನನ್ನೂ ಆರೋಪಿ ಎಂದು ಹೆಸರಿಸಲಾಗಿದೆ.

ಅಧಿಕಾರಿಯ ಮೇಲೆ ಅತ್ಯಾಚಾರ ಹಾಗೂ ಕಠಿಣ ಪೋಕ್ಸೊ ಕಾಯ್ದೆಯಡಿ ಆರೋಪ ಹೊರಿಸಿರುವುದಾಗಿ ಲಲಿತ್‌ಪುರ ಪೊಲೀಸರು ತಿಳಿಸಿದ್ದಾರೆ.