ಮುಂಬೈ: ನಟ ವಿಕ್ರಾಂತ್ ಮಾಸ್ಸೆ (Vikrant Massey) ಅಭಿನಯ ದಿ ಸಮರಮತಿ ರಿಪೋರ್ಟ್ (The Sabarmati Report) ದೇಶದಾದ್ಯಂತ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಕಂಡಿದೆ. ಪ್ರಧಾನಿ ಮೋದಿ (Narendra Modi) ಸೇರಿದಂತೆ ಅನೇಕ ರಾಜಕೀಯ ನಾಯಕರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದೀಗ ವಿಕ್ರಾಂತ್ ಮಾಸ್ಸೆ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ್ದು, ಚಿತ್ರ ಪ್ರದರ್ಶನದ ವೇಳೆ ಪ್ರಧಾನಿ ಭಾವುಕರಾಗಿದ್ದರು ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.
ಪ್ರಧಾನಿ ಹಾಗೂ ಸಂಸತ್ ಸದಸ್ಯರಿಗೆ ಚಿತ್ರ ವೀಕ್ಷಣೆಗಾಗಿ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಈ ವೇಳೆ ಸಿನಿಮಾ ವೀಕ್ಷಿಸಿದ ಮೋದಿ, ಮೆಚ್ಚುಗೆಯ ಮಾತುಗಳನ್ನಾಡಿದ್ದರು ಎಂದು ವಿಕ್ರಾಂತ್ ತಿಳಿಸಿದ್ದಾರೆ. ಪ್ರಧಾನಿಯವರಿಗೆ ಸಿನಿಮಾ ನೋಡಿ ಬಹಳ ಖುಷಿಯಾಗಿದೆ. ಒಂದು ಕ್ಷಣ ಅವರು ಭಾವುಕರಾಗಿದ್ದರು. ಅವರ ಕಣ್ಣಂಚಿನಲ್ಲಿ ನೀರಿತ್ತು. ಜನರಿಗೆ ಸತ್ಯವನ್ನು ತಲುಪಿಸುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದೆನಿಸಿತು ಎಂದು ತಿಳಿಸಿದರು.
ಪ್ರಧಾನಿಗೆ ಧನ್ಯವಾದ ತಿಳಿಸಿದ ಮಾಸ್ಸೆ
ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಸತ್ಯವನ್ನು ತಿಳಿಸಲು ಪ್ರಯತ್ನ ಪಟ್ಟಿದ್ದಕ್ಕಾಗಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇದು ನನ್ನ ಜೀವನದುದ್ದಕ್ಕೂ ನೆನಪಿನಲ್ಲಿರುವ ಘಟನೆಯಾಗಿದೆ. ಇದಕ್ಕಾಗಿ ನಾನು ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಡಿಸೆಂಬರ್ ತಿಂಗಳ ಮೊದಲನೇ ವಾರದಲ್ಲಿ ನವದೆಹಲಿಯ ಸಂಸತ್ತಿನ ಬಾಲಯೋಗಿ ಆಡಿಟೋರಿಯಂನಲ್ಲಿ ಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪ್ರಧಾನಿ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಸಂಸದರು ಭಾಗವಹಿಸಿದ್ದರು.
ಪ್ರದರ್ಶನದ ನಂತರ ಮಾಧ್ಯಮಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ ವಿಕ್ರಾಂತ್, “ನಾನು ಪ್ರಧಾನಿ, ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ಮತ್ತು ಅನೇಕ ಸಂಸದರೊಂದಿಗೆ ಚಲನಚಿತ್ರವನ್ನು ವೀಕ್ಷಿಸಿದೆ. ಇದು ವಿಶೇಷ ಅನುಭವವಾಗಿದೆ. ನಾನು ಅದನ್ನು ಸಂಪೂರ್ಣವಾಗಿ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಏಕೆಂದರೆ ನಾನು ತುಂಬಾ ಸಂತೋಷವಾಗಿದೆ. ಇದು ನನ್ನ ವೃತ್ತಿಜೀವನದ ಅತ್ಯುನ್ನತ ಅಂಶವಾಗಿದೆ ಎಂದು ಹೇಳಿದ್ದರು.
#WATCH | Delhi: After watching his film 'The Sabarmati Report' with Prime Minister Narendra Modi, actor Vikrant Massey says, "I watched the film with Prime Minister and all cabinet ministers and many MPs. It was a special experience. I will still not be able to express it in… pic.twitter.com/htzbo6ayaJ
— ANI (@ANI) December 2, 2024
ಈ ಸುದ್ದಿಯನ್ನೂ ಓದಿ : Vikrant Massey: ʻದಿ ಸಬರಮತಿ ರಿಪೋರ್ಟ್ʼ ಸಿನಿಮಾದ ನಂತರ ನನ್ನ 9 ತಿಂಗಳ ಮಗನಿಗೂ ಬೆದರಿಕೆ ಬರ್ತಾ ಇದೆ; ನಟ ವಿಕ್ರಾಂತ್ ಮಾಸ್ಸೆ ಆತಂಕ