ನವದೆಹಲಿ: ಕೆಲಸಕ್ಕಾಗಿ ಹಲವರು ಉದ್ಯೋಗವಕಾಶವಿರುವಂತಹ ವೆಬ್‍ಸೈಟ್‍ಗಳನ್ನು ತಡಕಾಡುತ್ತಿರುತ್ತಾರೆ. ಅಲ್ಲಿ ಉದ್ಯೋಗವಕಾಶಗಳು ತಮಗೆ ಅನುಕೂಲವಾಗಿದ್ದರೆ ಅದಕ್ಕೆ ಅರ್ಜಿ ಸಲ್ಲಿಸುತ್ತಾರೆ ಮತ್ತು ಅವರ ಕರೆಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ರಾತ್ರಿ ಬೆಳಗಾಗುವುದರೊಳಗೆ ವಿವಿಧ ಕಂಪನಿಗಳಿಂದ ಸಂದರ್ಶನಕ್ಕಾಗಿ ಅನೇಕ ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ಅದು ಹೇಗೆ ಸಾಧ್ಯವಾಯಿತೆಂದರೆ ಆ ವ್ಯಕ್ತಿಯು ನಿದ್ರೆಯಲ್ಲಿದ್ದಾಗ ರಾತ್ರೋರಾತ್ರಿ ಎಐ ಸಹಾಯದಿಂದ 1000 ಉದ್ಯೋಗ ಪೋಸ್ಟಿಂಗ್‍ಗಳಿಗೆ ಅರ್ಜಿ ಸಲ್ಲಿಸಿದ್ದಾರಂತೆ. ಹಾಗಾಗಿ ಅವರು ಎಚ್ಚರಗೊಂಡಾಗ 50 ಸಂದರ್ಶನಕ್ಕಾಗಿ ಕರೆಗಳು ಬಂದಿದ್ದು, ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ರೆಡ್ಡಿಟ್ ಬಳಕೆದಾರರೊಬ್ಬರು ಹಾಸಿಗೆಯ ಮೇಲೆ ಆರಾಮವಾಗಿ ಮಲಗಿಕೊಂಡೇ ಎಐಯ ಸಹಾಯದಿಂದ 1000 ಉದ್ಯೋಗಗಳ ಮೇಲೆ ಕ್ಲಿಕ್ ಮಾಡಿದ್ದಾರೆ. ಇಲ್ಲಿ ಕೆಲಸಕ್ಕಾಗಿ ಅವರು ವೆಬ್ಸೈಟ್‍ಗಳು ಮತ್ತು ಅಪ್ಲಿಕೇಶನ್‍ಗಳನ್ನು ಬ್ರೌಸ್ ಮಾಡುವ ಬದಲು ಅವರು ಎಐಯ ಪ್ರಯೋಜನವನ್ನು ಬಳಸಿಕೊಂಡಿದ್ದಾರೆ. ಉತ್ತಮ ರೆಸ್ಯೂಮ್ ರಚಿಸುವುದರಿಂದ ಹಿಡಿದು ಉತ್ತಮ ಕೆಲಸದವರಗೆ ಇಡೀ ಅಪ್ಲಿಕೇಶನ್ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಅವರು ಎಐ ಬೋಟ್ ಅನ್ನು ಬಳಸಿದ್ದಾರೆ.
I used AI to automatically apply for 1000 jobs – and I got 50 interviews!
by inGetEmployed
ಕೆಲಸಕ್ಕೆ ಅರ್ಜಿ ಸಲ್ಲಿಸಲು ಎಐ ಬೋಟ್ ಬಳಸುವಂತೆ ಪ್ರೋತ್ಸಾಹಿಸಲು ಅವರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ತಾನು ನಿದ್ರೆಯಲ್ಲಿದ್ದಾಗ ಎಐ ರಾತ್ರೋರಾತ್ರಿ 1000 ಉದ್ಯೋಗ ಪೋಸ್ಟಿಂಗ್‍ಗಳಿಗೆ ಅರ್ಜಿ ಸಲ್ಲಿಸಿದ್ದರಿಂದ ತಾನು ಎಚ್ಚರಗೊಂಡಾಗ 50 ಸಂದರ್ಶನ ಕರೆಗಳನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಹಿಮದ ರಾಶಿಯಲ್ಲಿ ಚಿರತೆಗಳ ತುಂಟಾಟ… ಪ್ರವಾಸಿಗರಿಗೆ ಪ್ರಾಣ ಸಂಕಟ- ವಿಡಿಯೊ ನೋಡಿ
“ಅಭ್ಯರ್ಥಿಯ ಮಾಹಿತಿಯನ್ನು ವಿಶ್ಲೇಷಿಸುವ, ಉದ್ಯೋಗ ವಿವರಣೆಗಳನ್ನು ಪರಿಶೀಲಿಸುವ, ನೇಮಕಾತಿದಾರರು ಕೇಳುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಸ್ವಯಂಚಾಲಿತವಾಗಿ ಉದ್ಯೋಗಗಳಿಗೆ ಅನ್ವಯಿಸುವ ಎಐ ಬೋಟ್ ಅನ್ನು ನಾನು ರಚಿಸಿದ್ದೇನೆ” ಎಂದು ಅವರು ಬರೆದಿದ್ದಾರೆ.