ನವದೆಹಲಿ: ಭಾರತೀಯ ಉಬರ್ ಚಾಲಕರ ಬಗ್ಗೆ ತಮಾಷೆ ಮಾಡಿದ್ದಕ್ಕಾಗಿ ಅಮೆರಿಕನ್ ಮಹಿಳೆಯೊಬ್ಬಳು ಕೆಲಸ ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಈ ಬಗ್ಗೆ ಆಕೆ ತನ್ನ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಕನೆಕ್ಟಿಕಟ್‍ನ ಅಮೆರಿಕನ್ ಮಹಿಳೆ ಹಾನ್ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ ನಂತರ ತೊಂದರೆಗೆ ಸಿಲುಕಿದ್ದಾಳೆ. ತಮಾಷೆಗಾಗಿ ಮಾಡಿದ ಪೋಸ್ಟ್‌ನಿಂದ ಅನೇಕರು ತನ್ನ ಗುರುತನ್ನು ಬಹಿರಂಗಪಡಿಸಿದ್ದಾರೆ ಮತ್ತು ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆಕೆ ದೂರಿದ್ದಾಳೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
ಕೆಲವು ದಿನಗಳ ಹಿಂದೆ, ಹಾನ್ ಎರಡು ಸೆಲ್ಫಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಮೊದಲ ಸೆಲ್ಫಿಯಲ್ಲಿ, ಅವರು ನಗುತ್ತಿರುವುದು ಕಂಡುಬಂದರೆ, ಎರಡನೇ ಸೆಲ್ಫಿಯಲ್ಲಿ ಅವರು ಬೇಸರದಲ್ಲಿರುವುದು ಕಂಡುಬಂದಿದೆ. ಉಬರ್ ಬರುತ್ತಿದೆ ಎನ್ನುವುದಕ್ಕೆ ನಗುವ ಇಮೋಜಿ ಹಾಕಿದ್ದಾರೆ, ಹಾಗೇ ಚಾಲಕ ಭಾರತೀಯ ಎನ್ನುವುದಕ್ಕೆ ಬೇಸರದ ಇಮೋಜಿ ಹಾಕಿದ ಸೆಲ್ಪಿ ಪೋಸ್ಟ್ ಮಾಡಿದ್ದರು.
literally this.. pic.twitter.com/iIL7kvwA3K
— han (@hannaahhn) January 8, 2025
ಈ ಪೋಸ್ಟ್‌ಗೆ 9 ಮಿಲಿಯನ್ ವ್ಯೂವ್ಸ್ ಹಾಗೂ ನೂರಾರು ಕಾಮೆಂಟ್‍ಗಳನ್ನು ಬಂದಿವೆ. ಅನೇಕ ಕಾಮೆಂಟ್‍ಗಳಲ್ಲಿ ಮಹಿಳೆಯನ್ನು ಜನಾಂಗೀಯವಾದಿ ಎಂದು ಟೀಕಿಸಿದ್ದಾರೆ ಮತ್ತು ಹಾನ್ ಅನ್ನು ತುಂಬಾ ಹೀಯಾಳಿಸಿದ್ದಾರೆ. ಇದು ಅವರ ನಿಜವಾದ ಹೆಸರು ಮತ್ತು ಗುರುತನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಲು ಕಾರಣವಾಯಿತು.
ಈ ಸುದ್ದಿಯನ್ನೂ ಓದಿ:ರಾತ್ರಿ ಬೆಳಗಾಗುವುದರೊಳಗೆ ವ್ಯಕ್ತಿಗೆ ಜಾಕ್‌ಪಾಟ್- 50 ಕಂಪನಿಗಳಿಂದ ಸಂದರ್ಶನಕ್ಕೆ ಕರೆ; ಇದೆಲ್ಲಾ ಆಗಿದ್ದು ಹೇಗೆ?
ಹೀಗಾಗಿ ನಂತರ ಹಂಚಿಕೊಂಡ ಅಪ್‌ಡೇಟ್‌ನಲ್ಲಿ, ಮಹಿಳೆ -ಈ ಪೋಸ್ಟ್ ಅನ್ನು ಮಾಡಿದ್ದಕ್ಕಾಗಿ ತನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ನಾನು ತಮಾಷೆಯಾಗಿ ಟ್ವೀಟ್ ಮಾಡಿದ್ದಕ್ಕೆ ನನಗೆ ಹೀಗೆ ಮಾಡಿದ್ದಾರೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.