ಚೆನ್ನೈ: ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇಬೇಕು. ಆದರೆ ಕೆಲವೊಮ್ಮೆ ಈ ಸಾವು ಬಹಳ ವಿಚಿತ್ರ ರೀತಿಯಲ್ಲಿ ಸಂಭವಿಸುತ್ತದೆ. ಯಾರೂ ಊಹೆ ಮಾಡಿರದ ರೀತಿಯಲ್ಲಿ ಕೆಲವರ ಜೀವ ಹೊರಟು ಹೋಗುತ್ತದೆ. ನಾವೀಗ ಹೇಳ ಹೊರಟಿರುವುದು ಅಂತಹದ್ದೇ ಒಂದು ವಿಚಿತ್ರ ಪ್ರಕರಣ. ಬಾತ್‌ರೂಂ ಹಸ್ತಮೈಥುನ ಮಾಡಿಕೊಂಡ ಸಹಾಯಕ ಪ್ರಧ್ಯಾಪಕನೊಬ್ಬ ಮೃತಪಟ್ಟಿರುವ ವಿಚಿತ್ರ ಘಟನೆ ಇದಾಗಿದ್ದು, ಸದ್ಯ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹೆಚ್ಚು ತೃಪ್ತಿ ಹೊಂದಲು ಆತ ಅನುಸರಿಸಿದ ಮಾರ್ಗವೇ ಆತನಿಗೆ ಮುಳುವಾಗಿ ಪರಿಣಮಿಸಿದೆ ಎಂದು ಮೂಲಗಳು ತಿಳಿಸಿವೆ (Viral News).
ಹೌದು, ಈ ಸಹಾಯಕ ಪ್ರಧ್ಯಾಪಕ ಹೆಚ್ಚು ತೃಪ್ತಿ ಹೊಂದಲು ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ ಹಸ್ತ ಮೈಥುನ ಮಾಡಿಕೊಂಡಿದ್ದಾನೆ. ಈ ವೇಳೆ ಉಸಿಗಟ್ಟಿ ಮೃತಪಟ್ಟಿದ್ದಾನೆ ಎಂದು ವರದಿ ತಿಳಿಸಿದೆ.
ಘಟನೆ ವಿವರ
ಮೃತನನ್ನು 32 ವರ್ಷದ ಪ್ರಹರ್ ಕುಮಾರ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದ ಈತ ತಮಿಳುನಾಡಿನ ಚೆನ್ನೈಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಆತನ ಶವ ಮಧುರವಾಯಲ್‌ನ ಮನೆಯ ಬಾತ್‌ರೂಂನಲ್ಲಿ ಪತ್ತೆಯಾಗಿತ್ತು. ತನಿಖೆ ವೇಳೆ ಬೆಚ್ಚಿ ಬೀಳಿಸುವ ಸಂಗತಿ ಹೊರ ಬಿದ್ದಿದೆ.
ʼʼಲಾಕ್ ಮಾಡಲಾದ ಮನೆಯ ಬಾತ್‌ರೂಂ ಒಳಗೆ ಮುಖಕ್ಕೆ ಪ್ಲಾಸ್ಟಿಕ್ ಕವರ್ ಮುಚ್ಚಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿತ್ತುʼʼ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಗೆ 5 ವರ್ಷಗಳ ಹಿಂದೆ ಮದುವೆಯಾಗಿದ್ದು, ಪತ್ನಿ ಉತ್ತರ ಪ್ರದೇಶದಲ್ಲಿ ವಾಸವಾಗಿದ್ದಾಳೆ. ಕುಂದ್ರಾತೂರ್‌ನ ಖಾಸಗಿ ಕಾಲೇಜಿನಲ್ಲಿ ಉದ್ಯೋಗ ದೊರೆತ ಹಿನ್ನೆಲೆಯಲ್ಲಿ ಈತ ಕಳೆದ 4 ತಿಂಗಳಿಂದ ಮಧುರವಾಯಲ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಪ್ರಹರ್ ಕುಮಾರ್ ನಿಯಮಿತವಾಗಿ ತನ್ನ ಪತ್ನಿಯೊಂದಿಗೆ ಮಾತನಾಡುತ್ತಿದ್ದ. ಆದರೆ ಇತ್ತೀಚೆಗೆ ಎಷ್ಟು ಕರೆ ಮಾಡಿದರೂ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿರುವ ಆತನ ಪತ್ನಿಗೆ ಆತಂಕ ಮೂಡಿತ್ತು. ಹೀಗಾಗಿ ಆಕೆ ಚೆನ್ನೈಯಲ್ಲಿರುವ ಪ್ರಹರ್ ಕುಮಾರ್‌ನ ಸ್ನೇಹಿತ ಸೋನಿಯನ್ನು ಸಂಪರ್ಕಿಸಿದ್ದಳು. ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೇ ಅಧಿಕಾರಿಗಳು ಮನೆಯತ್ತ ಧಾವಿಸಿದರು. ಮನೆ ಬಳಿ ಬಂದಾಗ ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂದಿತ್ತು. ಯಾವುದೇ ದಾಳಿ, ಆಕ್ರಮಣ ನಡೆದಿರುವ ಕುರುಹು ಕಂಡು ಬಾರದ ಹಿನ್ನೆಲೆಯಲ್ಲಿ ಪೊಲೀಸರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದರು.
ಮನೆ ಒಳಗೂ ಪ್ರಹರ್ ಕುಮಾರ್ ಕಂಡು ಬಂದಿರಲಿಲ್ಲ. ಕೊನೆಗೆ ಬೆಡ್‌ರೂಂನ ಬಾತ್‌ರೂಂ ಲಾಕ್ ಆಗಿರುವುದು ಗಮನಕ್ಕೆ ಬಂದಿತ್ತು. ಅದರ ಬಾಗಿಲನ್ನೂ ಒಡೆದು ನೋಡಿದಾಗ ಪ್ರಹರ್ ಕುಮಾರ್ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಈತನ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿರುವುದು ಕಂಡು ಬಂದಿತ್ತು. ಯಾವುದೇ ದಾಳಿಯ ಕುರುಹು ಕಂಡು ಬರದ ಕಾರಣ ಪೋಸ್ಟ್ ಮಾರ್ಟಂ ನಡೆಸಿದಾಗ ರಹಸ್ಯ ಬಯಲಾಗಿದೆ. ಹೆಚ್ಚಿನ ತೃಪ್ತಿಗಾಗಿ ಆತ ಮುಖಕ್ಕೆ ಪ್ಲಾಸ್ಟಿಕ್ ಕವರ್ ಸುತ್ತಿ ಹಸ್ತ ಮೈಥುನ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; 19 ವರ್ಷದ ಯುವತಿಯ ಬಂಧನ