ಪಾಟ್ನಾ: ಬಿಹಾರದ (Bihar) ಕಾಲೇಜು ಕ್ಯಾಂಪಸ್‌ನಲ್ಲಿ ಮೂವರು ಪುಂಡರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಗಳು ಸಂತ್ರಸ್ತನನ್ನು ಕೋಲು ಮತ್ತು ಬೆಲ್ಟ್‌ನಿಂದ ಥಳಿಸಿದ್ದಾರೆ. ಆರೋಪಿಗಳು ನೆಲದ ಮೇಲೆ ಉಗುಳಿ ಬಲವಂತವಾಗಿ ಆತನಿಗೆ ನೆಕ್ಕುವಂತೆ ಮಾಡಿದ್ದಾರೆ ಎಂದು ಆತನ ತಾಯಿ ಆರೋಪಿಸಿದ್ದಾರೆ. ಈ ವಿಡಿಯೋ ಮುಜಾಫರ್‌ಪುರದ ಎಂಎಸ್‌ಕೆಬಿ ಕಾಲೇಜಿನಲ್ಲಿ ಚಿತ್ರೀಕರಿಸಿದ ವೀಡಿಯೊ ಎಂದು ಹೇಳಲಾಗಿದೆ(Viral News)
ಘಟನಾ ಸ್ಥಳದಲ್ಲಿ ಕೆಲ ಪುರುಷರು ಹಾಗೂ ಮಹಿಳೆಯರು ಇದ್ದರು. ಆದರೆ ಎಲ್ಲರೂ ಘಟನೆಯನ್ನು ವೀಕ್ಷಿಸಿದರೇ ಹೊರೆತು ಮಧ್ಯಪ್ರವೇಶಿಸಿ ವ್ಯಕ್ತಿಯನ್ನು ಪುಡಂರಿಂದ ಬಿಡಿಸುವ ಪ್ರಯತ್ನ ಮಾಡಲಿಲ್ಲ ಎಂದು ತಾಯಿ ಆರೋಪಿಸಿದ್ದಾರೆ. ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿ ವ್ಯಕ್ತಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಾಣಿಸುತ್ತದೆ. ಆದರೆ ತನ್ನ ದಾಳಿಕೋರರು ಆತನ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ.
मुजफ्फरपुर के एक कॉलेज परिसर में बदमाशों के एक गुट ने एक लड़के की बेरहमी पिटाई कर दी, लात, बेल्ट और डंडे से पीटने के बाद फिर उससे उठक बैठक भी कराया. जिसका एक वीडियो सोशल मीडिया पर बड़ी तेजी से अब वायरल हो रहा है…@bihar_police @MuzaffarpurPol3 #fight #collegestudents #Bihar pic.twitter.com/c3sudfWeTu
— News4Nation (@news4nations) December 21, 2024
ಸಂತ್ರಸ್ತನ ತಾಯಿ ಘಟನೆಯ ಬಗ್ಗೆ ಲಿಖಿತ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಹಾಗೂ ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋ ವೈರಲ್ ಆದ ನಂತರವೇ ಅವರ ಕುಟುಂಬಕ್ಕೆ ಹಲ್ಲೆಯ ವಿಷಯ ತಿಳಿಯಿತು. ಆರೋಪಿಗಳು ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಕಾರಣದಿಂದ ಸುಮ್ಮನಿದ್ದೆವು ಎಂದು ಆತನ ತಾಯಿ ಹೇಳಿದ್ದಾರೆ. ಆದರೆ ವೀಡಿಯೊ ಬಗ್ಗೆ ಕೇಳಿದಾಗ, ಅವನು ನಡೆದ ಘಟನೆಯನ್ನು ಬಹಿರಂಗ ಪಡಿಸಿದನು. ನಂತರ ನಾವು ಪೊಲೀಸರ ಮೊರೆ ಹೋದೆವು ಎಂದು ಅವರು ಹೇಳಿದ್ದಾರೆ.
ದೂರಿನಲ್ಲಿ ತನ್ನ ಮಗನು ಅನುಭವಿಸಿದ ಭಯಾನಕತೆಯನ್ನು ವಿವರಿಸಿದ ತಾಯಿ ಅವನು ಮನೆಕೆಲಸಕ್ಕಾಗಿ ಬನಾರಸ್ ಬ್ಯಾಂಕ್ ಚೌಕ್‌ಗೆ ಹೋಗಿದ್ದಾಗ ಆರೋಪಿಗಳು ಅವನನ್ನು ಹೊಲಕ್ಕೆ ಎಳೆದೊಯ್ದರು. ತನ್ನ ಮಗ ತಮ್ಮೊಂದಿಗೆ ಮನವಿ ಮಾಡುತ್ತಲೇ ಇದ್ದನು, ಆದರೆ ಆರೋಪಿಗಳು ಆತನ ಮೇಲೆ ನಿರಂತವಾಗಿ ಹಲ್ಲೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರು ಅವನನ್ನು ಹೊಡೆಯುತ್ತಲೇ ಇದ್ದರು ಮತ್ತು ಉಗುಳನ್ನು ನೆಕ್ಕುವಂತೆ ಒತ್ತಾಯಿಸಿದರು ಎಂದು ತಾಯಿ ಹೇಳಿದರು. ಆರೋಪಿಗಳು ಆತನಿಂದ 2,000 ರೂ. ದೋಚಿದ್ದಾರೆ ಎಂದು ಆರೋಪಿಸಿದ್ದಾರೆ .
ಪ್ರತ್ಯೇಕ ಘಟನೆಯಲ್ಲಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ, ಉಗುಳನ್ನು ನೆಕ್ಕುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ನಲ್ಲಿ ಬಿಹಾರ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಮರದ ತುಂಡುಗಳಿಂದ ವ್ಯಕ್ತಿಯೊಬ್ಬನನ್ನು ಥಳಿಸಿರುವ ವಿಡಿಯೋ ವೈರಲ್ ಆದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ : Children Kidnap: ಬೆಳಗಾವಿಯಲ್ಲಿ ಹಾಡ ಹಗಲೇ ಇಬ್ಬರು ಮಕ್ಕಳ ಕಿಡ್ನಾಪ್; ವಿಡಿಯೋ ವೈರಲ್