ನವದೆಹಲಿ: ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಸಿಕೊಳ್ಳುವ ಬೆಂಗಳೂರು (Bengaluru) ನಗರವು ದೇಶದ ಮೂಲೆ ಮೂಲೆಗಳಿಂದ ಉದ್ಯೋಗಸ್ಥರನ್ನು , ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದರೆ, ಕೆಲ ಉತ್ತರ ಭಾರತೀಯರು ಮಾತ್ರ ಬೆಂಗಳೂರಿನ ಬಗ್ಗೆ ಸದಾ ದೂರುತ್ತಿರುತ್ತಾರೆ. ಕನ್ನಡ ಮಾತನಾಡದ ಕಾರಣ ಕಿರುಕುಳಕ್ಕೊಳಗಾದ ಅನುಭವಗಳನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಕಾರ್ಸ್ 24 (Cars24 CEO) ನ ಸಿಇಒ ವಿಕ್ರಮ್ ಚೋಪ್ರಾ ಅವರ ಪೋಸ್ಟ್ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ. (Viral News)
ಚೋಪ್ರಾ ಅವರು ಬೆಂಗಳೂರಿನಲ್ಲಿ ನೆಲೆಸಿದ ಇತರ ಭಾಷಿಕರಿಗೆ ಆಫರ್ ನೀಡಿದ್ದು, ತಮ್ಮ ಎಕ್ಸ್ ಖಾತೆಯಲ್ಲಿ ಬೆಂಗಳೂರಿನಲ್ಲಿ ವರ್ಷಗಳಾದರೂ ಇನ್ನೂ ಕನ್ನಡ ಮಾತನಾಡುತ್ತಿಲ್ಲವೇ? ಪರವಾಗಿಲ್ಲ. ದೆಹಲಿಗೆ ಬನ್ನಿ ಎಂದು ಜಾಬ್ ಆಫರ್ ನೀಡುವ ಪೋಸ್ಟ್ ಮಾಡಿದ್ದಾರೆ.
We are not saying Delhi NCR is better. Only that it really is.
— Vikram Chopra (@vikramchopra) December 19, 2024
If you wish to come back, write to me at vikram@cars24.com with the subject – Delhi meri jaan ♥️ pic.twitter.com/lgQpXMiaKt
ಪೋಸ್ಟ್‌ನಲ್ಲಿ ನಮಗೆ ಗೊತ್ತು ದೆಹಲಿ ವಾಯುಗುಣ ಉತ್ತಮವಾಗಿಲ್ಲ ಎಂದು, ನಮ್ಮ ಕಂಪನಿ ಕಿಕಾಸ್ ಎಂಜಿನಿಯರ್‌ಗಳನ್ನು ಹುಡುಕುತ್ತಿದ್ದು, ನಿಮಗೆ ನಿಮ್ಮ ಮನೆಯ ಹತ್ತಿರದಲ್ಲಿಯೇ ಕೆಲಸ ಮಾಡಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ನೆಟ್ಟಿಗರಿಂದ ಟೀಕೆ
ವಿಕ್ರಮ್ ಚೋಪ್ರಾ ಅವರ ಈ ಟ್ವೀಟ್‌ಗೆ ಸಾಕಷ್ಟು ಟೀಕೆಗಳು ಎದುರಾಗಿವೆ. ಕರ್ನಾಟಕದಲ್ಲಿ ಇದ್ದುಕೊಂಡು ಕನ್ನಡ ಮಾತನಾಡಿ ಇಲ್ಲವೇ ಕಲಿಯುವ ಪ್ರಯತ್ನವನ್ನಾದರೂ ಮಾಡಬೇಕೆಂದು ಹಲವರು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ದೆಹಲಿ ಉತ್ತರ ಭಾರತದವರು ಮಾತ್ರ ನೀವು ಕೆಲಸಕ್ಕೆ ತೆಗೆದುಕೊಳ್ಳುತ್ತೀರಾ ಎಂದಾದರೆ ನಮ್ಮ ಬೆಂಗಳೂರಿನಲ್ಲಿಯೂ ಕನ್ನಡಿಗರಿಗಷ್ಟೇ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಕನ್ನಡ ವಾತಾವರಣವನ್ನು ಬೆಳೆಸಲು ಬಲವಾದ ಕರೆ ನೀಡಿದ್ದರು. ಕರ್ನಾಟಕದ ಎಲ್ಲಾ ನಿವಾಸಿಗಳು ತಮ್ಮ ದೈನಂದಿನ ಜೀವನದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಬೇಕೆಂದು ಅವರು ಒತ್ತಾಯಿಸಿದ್ದರು.
ಕನ್ನಡ ಭಾಷೆ, ನೆಲ, ಜಲ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಯಾವುದೇ ಭಾಷಾ ಹಿನ್ನೆಲೆಯಿದ್ದರೂ ಕನ್ನಡ ಮಾತನಾಡುವುದು ರಾಜ್ಯದ ಎಲ್ಲ ನಿವಾಸಿಗಳ ಪ್ರಜ್ಞಾಪೂರ್ವಕ ನಿರ್ಧಾರವಾಗಬೇಕು ಅವರು ಕರೆ ನೀಡಿದ್ದರು.
ಈ ಸುದ್ದಿಯನ್ನೂ ಓದಿ : Kannada Sahitya Sammelana: 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ ಆಯ್ಕೆ